ನೀತಿ ಸಂಹಿತೆ ನಿರ್ವಹಣೆ ಕೋಶ
ಮಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಕುರಿತು ಸಾರ್ವಜನಿಕರ ದೂರು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿರ್ವಹಣೆ ಕೋಶ ಆರಂಭಿಸಲಾಗಿದೆ. ದೂರುಗಳಿದ್ದರೆ 0824-2220590 ಸಂಪರ್ಕಿಸಿ ಹೇಳಬಹುದು ಎಂದು ಜಿಲ್ಲಾ ಚುನಾವಣೆ ಅಧಿಕಾರಿ, ಜಿಲ್ಲಾಧಿಕಾರಿ ಎನ್.ಪ್ರಕಾಶ್ ತಿಳಿಸಿದ್ದಾರೆ.
ವೀಕ್ಷಕರ ನೇಮಕ
ಮಂಗಳೂರು: ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆಗೆ ವೀಕ್ಷಕರನ್ನು ನೇಮಿಸಲಾಗಿದೆ. ಮಹಾನಗರ ಪಾಲಿಕೆಗೆ ಸರ್ಕಾರ ಅಪರ ಕಾರ್ಯದರ್ಶಿ ಶಿವಲಿಂಗಮೂರ್ತಿ, ಮೂಡುಬಿದರೆ, ಉಳ್ಳಾಲ, ಬಂಟ್ವಾಳಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಬೆಟಸೂರ್ ಮಠ್, ಪುತ್ತೂರು, ಬೆಳ್ತಂಗಡಿ, ಸುಳ್ಯಕ್ಕೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಅವರನ್ನು ನೇಮಿಸಿ ಚುನಾವಣೆ ಆಯೋಗ ಆದೇಶ ಹೊರಡಿಸಿದೆ.
ಪಾಲಿಕೆ ಆಡಳಿತಾಧಿಕಾರಿ ಡಿಸಿ: ಚುನಾವಣೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಫೆ.21ರಿಂದ ಆಧಿಕಾರ ಸ್ವೀಕರಿಸಲಿದ್ದಾರೆ.