ರೌಡಿಸಂ ಪ್ರಾಣಕ್ಕೆರವಾಯ್ತು
ಮಂಗಳೂರು: ಸಂದೀಪ್ ವಿರುದ್ಧ ಹಲವು ಹಲ್ಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿದೆ. ಸ್ಥಳೀಯ ಪುಡಿ ರೌಡಿಗಳ ಗ್ಯಾಂಗ್ ಮಾಡಿಕೊಂಡು ಪರಿಸರದಲ್ಲಿ ಗಲಾಟೆ ಮಾಡಿಕೊಂಡಿದ್ದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ವಾರ ತಂಡದ ಇತರೆ ಸದಸ್ಯರ ಜತೆ ಗಲಾಟೆ ನಡೆದಿದೆ. ಶುಕ್ರವಾರ ರಾತ್ರಿ ಸಂದೀಪ್ ತನ್ನ ಸಂಬಂಧಿ ಮನೋಜ್ ಜತೆ ಇಡ್ಯಾ ಬಳಿ ಗಲಾಟೆ ಮಾಡಿದ್ದ. ಈ ಗಲಾಟೆಯೇ ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂಬುದು ಸ್ಥಳೀಯರ ಶಂಕೆ.
ರಾತ್ರಿ ಸಂದೀಪ ತಲವಾರ್ ಹಿಡಿದುಕೊಂಡು ಮನೋಜ್ನನ್ನು ಕೊಂದೇ ತಿರುವುದಾಗಿ ಹೇಳುತ್ತಿದ್ದ. ಇಬ್ಬರ ಜಗಳ ತಡರಾತ್ರಿ ವರೆಗೆ ನಡೆದಿತ್ತು. ಬಳಿಕ ತಂಡದ ಆರು ಮಂದಿಯೂ ನಾಪತ್ತೆಯಾಗಿದ್ದರು. ಮಂಗಳವಾರ ಮೃತದೇಹ ಪತ್ತೆಯಾಗಿತ್ತು. ಸುರತ್ಕಲ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.