ಸಂಜೆ- ಎಲ್ಲ ಸರಿ ಆಯ್ತು ಎಂದ ಅಶ್ರಫ್!
ಮಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಜನಾರ್ದನ ಪೂಜಾರಿ ವಿರುದ್ಧ ಹಾರಿ ಹಾಯ್ದ ಬಳಿಕ ಮಾಜಿ ಮೇಯರ್ ಆಶ್ರಫ್ ಚುನಾವಣೆ ಸಮಿತಿಯಲ್ಲಿ ಹೆಸರು ಹಾಕದೆ ತಾರತಮ್ಯ ಮಾಡಿದ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಬುಧವಾರ ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಆಶ್ರಫ್, ಪೂಜಾರಿ ತಾನೇ ಉಸ್ತುವಾರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರ ನೇತೃತ್ವದಲ್ಲಿ ಚುನಾವಣೆ ನಡೆಸಿದರೆ ದೇವರೇ ಗತಿ ಎಂದು ವ್ಯಂಗ್ಯವಾಡಿದರು. ನನ್ನ ಬ್ಲಾಕ್ನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ಗಳನ್ನು ಗೆಲ್ಲಿಸಿದ್ದು, ಮುಂದೆಯೂ ಗೆಲ್ಲಿಸುತ್ತೇನೆ ಎಂದು ಗುಡುಗಿದರು. ಒಂದು ಹಂತದಲ್ಲಿ ಏಕವಚನದಲ್ಲಿ ಮಾತನಾಡಿದ ಆಶ್ರಫ್, ಪೂಜಾರಿ ನಾಯಕತ್ವವನ್ನು ಒಪ್ಪುವುದಿಲ್ಲ, ನಾನು ಅಧಿಕಾರದ ಹಿಂದೆ ಬಿದ್ದಿಲ್ಲ, ಉಚ್ಚಾಟಿಸಿದರೂ ನಾನು ಹೆದರುವುದಿಲ್ಲ ಎಂದು ಗರ್ಜಿಸಿದರು. ಪೂಜಾರಿ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೂ ದೂರು ನೀಡುವುದಾಗಿ ಎಚ್ಚರಿಸಿದರು. ಕೋಪ ತಣಿದ ಬಳಿಕ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತುಗಳನ್ನು ಹಿಂಪಡೆದ ಆಶ್ರಫ್, ರಾಹುಲ್ಗಾಂಧಿಗೆ, ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡುವುದಿಲ್ಲ. ಈಗ ಎಲ್ಲ ಸರಿಯಾಗಿದೆ ಎಂದರು.