ಸುಬ್ರಹ್ಮಣ್ಯ: ಕಾಡಾನೆ ದಾಳಿ, ಅಪಾರ ಬೆಳೆಹಾನಿ
ಸುಬ್ರಹ್ಮಣ್ಯ: ಪುಣ್ಯಕ್ಷೇತ್ರ ಸುಬ್ರಹ್ಮಣ್ಯ ಪರಿಸರದ ತೋಟಗಳಿಗೆ ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆ ತನಕ ಕಾಡಾನೆಗಳು ದಾಳಿ ಮಾಡಿ ತೆಂಗು, ಅಡಕೆ ಮರಗಳು ಹಾಗೂ ಬಾಳೆಗಿಡಗಳನ್ನು ದ್ವಂಸ ಮಾಡಿವೆ. ಇಂಜಾಡಿಯ ಪುರುಷೋತ್ತಮ ಭಟ್ ಎಂಬವರ ತೋಟದ ಫಲಭರಿತ ಅಡಕೆ ಮರಗಳನ್ನು ಕಾಡಾನೆಗಳು ನಾಶ ಮಾಡಿವೆ. ಅಲ್ಲದೆ, ಇಂಜಾಡಿಯ ದೇವಸ್ಥಾನದ ತೋಟಕ್ಕೆ ಲಗ್ಗೆಯಿಟ್ಟು ಫಲಭರಿತ ತೆಂಗಿನ ಮರವನ್ನು ಉರುಳಿಸಿದೆ. ಕೃಷಿಕ ರಾಮಶರ್ಮರ ತೋಟಕ್ಕೆ ದಾಳಿಯಿಟ್ಟ ಕಾಡಾನೆ, ರಾತ್ರಿಯಿಂದ ಮುಂಜಾನೆ ತನಕ ತೋಟದಲ್ಲಿ ಅಡ್ಡಾಡಿ ಅಡಕೆ ಮತ್ತು ಬಾಳೆ ಗಿಡಗಳನ್ನು ದ್ವಂಸಗೊಳಿಸಿದೆ. ನೀರಾವರಿಗಾಗಿ ಇರುವ ಸ್ಪ್ರಿಂಕ್ಲರ್, ಜೆಟ್ ಹಾಗೂ ಪೈಪ್ಲೈನ್ಗಳು ಆನೆಗಳ ತುಳಿತಕ್ಕೆ ಸಿಕ್ಕಿ ಜಖಂಗೊಂಡಿವೆ.