ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗುತ್ತಿಗಾರು: ಅಗ್ನಿ ಅನಾಹುತ, ಮನೆ ಸಂಪೂರ್ಣ ಭಸ್ಮ

Lingaraj Badiger
Updated On : 22 Feb 2013, 11:58 am

ಸುಬ್ರಹ್ಮಣ್ಯ: ಗುತ್ತಿಗಾರು ಸಮೀಪದ ಪೈಕ ಎಂಬಲ್ಲಿ ಸೆಲ್ವ ಎಂಬವರ ಮನೆಗೆ ಗುರುವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟುಹೋಗಿದೆ.
 ಮನೆಯ ಛಾವಣಿಯ ಹೆಂಚು ಮತ್ತು ಶೀಟುಗಳು ಸುಟ್ಟು ಕರಕಲಾಗಿದ್ದು, ಕೇವಲ ಗೋಡೆಗಳು ಮಾತ್ರ ಬಾಕಿ ಉಳಿದಿವೆ. ಮನೆಯೊಳಗೆ ಇದ್ದ ರು. 15 ಸಾವಿರ ಹಣ ಮತ್ತು 10 ಪವನ್ ಚಿನ್ನ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕರಕಲಾಗಿದೆ. ಮನೆಯೊಳಗಿದ್ದ ಪೀಠೋಪಕರಣಗಳು ಹಾಗೂ ಸಾಮಗ್ರಿಗಳು ಸಂಪೂರ್ಣ ಅಗ್ನಿಗಾಹುತಿಯಾಗಿವೆ.
 ಅವಘಡ ಸಂದರ್ಭ ಸೆಲ್ವ ಅವರು ಅನಾರೋಗ್ಯದ ಕಾರಣ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರೊಂದಿಗೆ ಅವರ ಪತ್ನಿಯೂ ಇದ್ದರು. ಈ ಸಮಯದಲ್ಲಿ ಮನೆಯಲ್ಲಿ ಅವರ ತಾಯಿ ಮತ್ತು ಇಬ್ಬರು ಮಕ್ಕಳು ಇದ್ದರು. ಸೆಲ್ವ ಅವರ ತಾಯಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ರು. 6 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement