ಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಮಂಗಳೂರು: ಮಾರ್ಚ್ 7 ರಂದು ನಡೆಯುವ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆಗೊಳಿಸಿದೆ.
ಆ ಪ್ರಕಾರ ಸುರತ್ಕಲ್ ಪೂರ್ವದಲ್ಲಿ ಸುಮಿತ್ರ ಕರಿಯ, ಕಾಟಿಪಳ್ಳ ಉತ್ತರದಲ್ಲಿ ದೇವೇಂದ್ರ ಕೋಟ್ಯಾನ್, ಇಡ್ಯಾ ಪೂರ್ವದಲ್ಲಿ ಗುಣಶೇಖರ ಶೆಟ್ಟಿ, ಹೊಸಬೆಟ್ಟಿನಲ್ಲಿ ಗಣೇಶ ಹೊಸಬೆಟ್ಟು, ಬೈಕಂಪಾಡಿಯಲ್ಲಿ ರಾಜೇಶ್ ಸಾಲ್ಯಾನ್, ಪಂಜಿಮೊಗರಲ್ಲಿ ಶಾಂತ ಆರ್., ಕುಂಜತ್ತಬೈಲ್ ಉತ್ತರದಲ್ಲಿ ಶರತ್ ಕುಮಾರ್, ಮರಕಡದಲ್ಲಿ ಕಿಶೋರ್ ರೈ, ಕುಂಜತ್ತಬೈಲ್ ದಕ್ಷಿಣದಲ್ಲಿ ಮಧುಕಿರಣ್, ಬಂಗ್ರ ಕೂಳೂರಲ್ಲಿ ಹರೀಶ್ ಶೆಟ್ಟಿ, ಕಾವೂರಲ್ಲಿ ಸುಚೇತನ್ ಜಿ.ಕಾವೂರು, ಪಚ್ಚನಾಡಿಯಲ್ಲಿ ಸರಿತಾ ಸಂದೀಪ್, ಪದವು ಪಶ್ಚಿಮದಿಂದ ಶಕಿಲ ಕಾವ, ಬಿಜೈ ಜಗದೀಶ್ ಬಿಜೈ, ಕದ್ರಿ ಉತ್ತರದಿಂದ ರೂಪಾ ಡಿ. ಬಂಗೇರ, ಕದ್ರಿ ದಕ್ಷಿಣದಿಂದ ಶ್ರೀಕಾಂತ್ ರಾವ್, ಶಿವಭಾಗ್ನಿಂದ ಸಂಧ್ಯಾ ವೆಂಕಟೇಶ್, ಪದವು ಸೆಂಟ್ರಲ್ನಿಂದ ಸುಮನಾ ಶರಣ್, ಪದವು ಪೂರ್ವದಿಂದ ಅನಿಲ್ ರಾವ್, ಮರೋಳಿಯಿಂದ ಜಗದೀಶ್ ಶೆಣೈ, ಬೆಂದೂರಿನಿಂದ ತಿಮ್ಮಪ್ಪ ಪೂಜಾರಿ, ಫಳ್ನೀರ್ನಿಂದ ಇಂದಿರಾ ರವಿ, ಕೋರ್ಟ್ನಿಂದ ರಂಗನಾಥ್ ಕಿಣಿ, ಕುದ್ರೋಳಿಯಿಂದ ಅನ್ವರ್ ರಿಕೋ, ಬಂದರ್ನಿಂದ ವಿದ್ಯಾ ಕುಡ್ವ, ಪೋರ್ಟ್ನಿಂದ ಮನೋಜ್ ಕುಮಾರ್ ಶೆಟ್ಟಿ, ಕಂಟೋನ್ಮೆಂಟ್ನಿಂದ ದಿವಾಕರ್, ವೆಲೆನ್ಸಿಯಾದಿಂದ ಪ್ರಭಾ ಮಾಲಿನಿ, ಕಂಕನಾಡಿಯಿಂದ ಭಾಸ್ಕರ ಚಂದ್ರ ಶೆಟ್ಟಿ, ಅಳಪೆ ದಕ್ಷಿಣದಿಂದ ವಿಜಯ್ ಕುಮಾರ್ ಶೆಟ್ಟಿ, ಕಣ್ಣೂರಿನಿಂದ ಸುಧೀರ್ ಶೆಟ್ಟಿ, ಬಜಾಲ್ನಿಂದ ಸರಸ್ವತಿ, ಮಂಗಳಾದೇವಿ ಪ್ರೇಮಾನಂದ ಶೆಟ್ಟಿ ಕಣಕ್ಕಿಳಿಯಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಕೆ. ಮೋನಪ್ಪ ಭಂಡಾರಿ ತಿಳಿಸಿದ್ದಾರೆ.