ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೋಹನ್ ಪಡೀಲ್ ಜೆಡಿಎಸ್‌ಗೆ

Lingaraj Badiger
Updated On : 22 Feb 2013, 11:59 am

ಮಂಗಳೂರು: ಬಿಜೆಪಿಯ ಪಾಲಿಕೆ ಸದಸ್ಯ ಮೋಹನ್ ಪಡೀಲ್ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಅದೇ ರೀತಿ ಬಿಜೆಪಿ ಸದಸ್ಯ ಗಣೇಶ್ ಮಲ್ಲಿ ಕೂಡ ಜೆಡಿಎಸ್ ಸೇರಿದ್ದಾರೆ. ಮೋಹನ್ ಪಡೀಲ್‌ಗೆ ಅಳಪೆಯಿಂದ, ಗಣೇಶ್ ಮಲ್ಲಿ ಮರಕಡದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪಾಲಿಕೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.
 ಫಳ್ನೀರ್‌ನ ಜೆಡಿಎಸ್ ಕಚೇರಿಯಲ್ಲಿ ಗುರುವಾರ ವಿಧಾನಸಭಾ ಅಭ್ಯರ್ಥಿ ಸದಾನಂದ ಶೆಟ್ಟಿ ಮತ್ತು ರಾಜ್ಯ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಉಪಸ್ಥಿತಿಯಲ್ಲಿ ಇವರಿಬ್ಬರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಇದೇ ವೇಳೆ ಮಾತನಾಡಿದ ನಾಗರಾಜ ಶೆಟ್ಟಿ, ಈ ಬಾರಿ ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲಾಗುವುದು ಎಂದರು.
ಬಿಜೆಪಿಯಿಂದ ಕಾವೂರಿನ ಕೆ.ಪಿ. ಜಗದೀಶ್, ರೋಹನ್, ನವೀನ್ ಜೆಡಿಎಸ್ ಸೇರಿದರು.
 ಪಾಲಿಕೆಯಲ್ಲಿ ಅತ್ಯುತ್ತಮ ಆಡಳಿತ ನೀಡುವುದು ಜೆಡಿಎಸ್ ಉದ್ದೇಶ. ಜಿಲ್ಲೆಯಲ್ಲಿ ಜೆಡಿಎಸ್ ಪರ ಅಲೆ ಇದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಜೆಡಿಎಸ್ ಪಾಲಿಗೆ ವರದಾನವಾಗಲಿದೆ ಎಂದು ನಾಗರಾಜ ಶೆಟ್ಟಿ ಹೇಳಿದರು. ರಸ್ತೆ ಡಂಬರೀಕರಣ ಭರವಸೆ ನೀಡಿದರೂ ಅದನ್ನು ಈಡೇರಿಸಿಲ್ಲ. ಅಳಪೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯನ್ನು ಒತ್ತುವರಿ ಮಾಡಿದ ಬಿಜೆಪಿಯ ವೈದ್ಯರೊಬ್ಬರು ಬೇಲಿ ಹಾಕಿದ್ದಾರೆ. ಈ ಬಗ್ಗೆ ಬಿಜೆಪಿ ಮೌನವಾಗಿದ್ದು, ಪಾಲಿಕೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸದಂತೆ ಪಕ್ಷದ ಮುಖಂಡರು ಒತ್ತಡ ಹಾಕುತ್ತಿದ್ದರು. ಈ ಎಲ್ಲ ಕಾರಣಗಳಿಂದ ಬಿಜೆಪಿ ತ್ಯಜಿಸಿದ್ದಾಗಿ ಹೇಳಿದರು.  ರಾಜ್ಯ ಕಾರ್ಯದರ್ಶಿ ಎಂ.ಜಿ. ಹೆಗಡೆ, ಮುಖಂಡರಾದ ಸುಶೀಲ್ ನರ್ಹೋನಾ, ಡಿ.ಎಂ.ಅಸ್ಲಂ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement