ಸುಳ್ಯ ನ.ಪಂ. ಚುನಾವಣೆ: ಬಿಜೆಪಿ ಪಟ್ಟಿ ಪ್ರಕಟ
ಸುಳ್ಯ: ಸುಳ್ಯ ನಗರ ಪಂಚಾಯಿತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆಗೊಳಿಸಿದ್ದು, 11 ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಸುದ್ದಿಗೋಷ್ಠಿಯಲ್ಲಿ ಹೆಸರುಗಳನ್ನು ಬಿಡುಗಡೆ ಮಾಡಿದರು. 2ನೇ ವಾರ್ಡ್ಗೆ ಶೀಲಾವತಿ, 3ನೇ ವಾರ್ಡ್ಗೆ ಜಾನಕಿ ನಾರಾಯಣ, 4ನೇ ವಾರ್ಡ್ಗೆ ಹರಿಣಾಕ್ಷಿ ನಾರಾಯಣ, 6ನೇ ವಾರ್ಡ್ಗೆ ಸುನಿತಾ ಮೊಂತೆರೋ, 9ನೇ ವಾರ್ಡ್ಗೆ ಮೋಹಿನಿ ನಾಗರಾಜ್, 10ನೇ ವಾರ್ಡ್ಗೆ ಗೋಪಾಲ್ ನಡುಬೈಲು, 12ನೇ ವಾರ್ಡ್ಗೆ ನಾರಾಯಣ ಎಂ., 13ನೇ ವಾರ್ಡ್ಗೆ ಜ್ಯೋತಿ ಆರ್. ರಾವ್, 14ನೇ ವಾರ್ಡ್ಗೆ ಜಿನ್ನಪ್ಪ ಪೂಜಾರಿ, 17ನೇ ವಾರ್ಡ್ಗೆ ಹಾಜಿರಾ, 18ನೇ ವಾರ್ಡ್ಗೆ ರಮಾನಂದ ರೈ ಸ್ಪರ್ಧಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೆ.ಎಫ್.ಡಿ.ಸಿ. ಅಧ್ಯಕ್ಷ ಎಸ್.ಎನ್. ಮನ್ಮಥ, ಪಿ.ಜಿ.ಎಸ್.ಎನ್. ಪ್ರಸಾದ್, ಪಿ.ಕೆ.ಉಮೇಶ್, ಪ್ರಕಾಶ್ ಹೆಗ್ಡೆ, ಎನ್.ಎ. ರಾಮಚಂದ್ರ, ರಮಾನಂದ ರೈ, ಜಯಪ್ರಕಾಶ್ ಕುಂಚಡ್ಕ, ಕೃಪಾಶಂಕರ್ ತುದಿಯಡ್ಕ ಮೊದಲಾದವರು ಗೋಷ್ಠಿಯಲ್ಲಿದ್ದರು.