5 ಕೋ. ಮಂಜೂರು, 4.34 ಕೋ. ಕಾಮಗಾರಿ
ಪ್ರಕಾಶ್ ಮೂಲ್ಕಿ
ಮೂಲ್ಕಿ: ಮೂಡುಬಿದಿರೆ ಕ್ಷೇತ್ರದಲ್ಲಿ ಶಾಸಕ ಕೆ. ಅಭಯಚಂದ್ರ ಜೈನ್ ಅವಧಿಯಲ್ಲಿ ಶಾಸಕರ ನಿಧಿಯಡಿ 2012-13ರ ಅವಧಿಯಲ್ಲಿ ರು. 5 ಕೋಟಿ ಮಂಜೂರಾಗಿದ್ದು 4.44 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ 4.34 ಕೋಟಿ ಕಾಮಗಾರಿ ನಡೆದಿದೆ.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನಿಧಿಯಲ್ಲಿ 1.25 ಕೋಟಿ ಬಿಡುಗಡೆಯಾಗಿದ್ದು ಕ್ಷೇತ್ರದಲ್ಲಿ 2 ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಬಜಪೆಯ ಮಳವೂರಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ 18 ಕೋಟಿ ಹಾಗೂ ಕುಡಿಯುವ ನೀರಿನ ಸರಬರಾಜುಗೆ 20 ಕೋಟಿ ಮತ್ತು ಕಿನ್ನಿಗೋಳಿ ಪರಿಸರದ ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 16.8 ಕೋಟಿ ಮಂಜೂರಾಗಿದೆ.
ಬಳ್ಕುಂಜೆ ಗ್ರಾಮದ ಕೊಲ್ಲೂರುಪದವಿನಲ್ಲಿ ಕುಡಿಯುವ ನೀರಿನ ಸಂಗ್ರಹಕ್ಕೆ ಓವರ್ಹೆಡ್ ಟ್ಯಾಂಕ್ಗಳ ನಿರ್ಮಾಣ, ಸಂಕಲಕರಿಯದ ಬಳಿ ಅಣೆಕಟ್ಟು ಹಾಗೂ ಗ್ರಾಮಗಳಿಗೆ ನೀರಿನ ಸರಬರಾಜು ಯೋಜನೆಯೂ ಒಳಗೊಂಡಿದೆ.
ಕೇಂದ್ರ ಸರ್ಕಾರದ ಸಹಯೋಜನೆ ಜಲಾನಯನ ಇಲಾಖೆಯಿಂದ 2008ರಿಂದ ಎನ್ಡಬ್ಯ್ಲೂಡಿಪಿಆರ್ಎ ಸ್ಕೀಮ್ನಲ್ಲಿ 90 ಲಕ್ಷ, ಐಡಬ್ಲ್ಯೂಡಿಪಿ ಸ್ಕೀಮ್ನಲ್ಲಿ ಕ್ಷೇತ್ರದ 10 ಪಂಚಾಯಿತಿಗಳಿಗೆ 3 ಕೋಟಿ, ಐಡಬ್ಲ್ಯೂಎನ್ಪಿ ಸ್ಕೀಮ್ನಲ್ಲಿ ಕ್ಷೇತ್ರದ 4 ಪಂಚಾಯಿತಿಗಳಿಗೆ 6 ಕೋಟಿ, ಐಡಬ್ಲ್ಯೂ ಎನ್ಪಿ 1ನಲ್ಲಿ ಕ್ಷೇತ್ರದ 6 ಪಂಚಾಯಿತಿಗಳಿಗೆ 6 ಕೋಟಿ ಮತ್ತು ಐಡಬ್ಲ್ಯೂಡಬ್ಲ್ಯೂಪಿ 111ರಲ್ಲಿ ಕ್ಷೇತ್ರದ 6 ಪಂಚಾಯತ್ಗಳಿಗೆ 6 ಕೋಟಿ ಸೇರಿದಂತೆ 21.90 ಕೋಟಿ ಮಂಜೂರಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ 2011-12ರಲ್ಲಿ ಪರಿಶಿಷ್ಟ ಜಾತಿ ಅಭಿವೃದ್ಧಿಗೆ 1 ಕೋಟಿ, ಪರಿಶಿಷ್ಟ ವರ್ಗಕ್ಕೆ 25 ಲಕ್ಷ, 2012- 13ರಲ್ಲಿ ಪರಿಶಿಷ್ಟ ಜಾತಿ ಕಾಲೋನಿ ಅಭಿವೃದ್ಧಿಗೆ 75 ಲಕ್ಷ, ಪರಿಶಿಷ್ಟ ವರ್ಗಕ್ಕೆ 50 ಲಕ್ಷ ಮಂಜೂರಾಗಿದೆ.
ಲೋಕೋಪಯೋಗಿ ಇಲಾಖೆ: ಮೂಡುಬಿದಿರೆ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯಿಂದ 2008- 12ರ ಅವಧಿಯಲ್ಲಿ ಒಟ್ಟು 41.46 ಕೋಟಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಅದರಲ್ಲಿ 18.25 ಕೋಟಿ ಕಾಮಗಾರಿ ಸಂಪೂರ್ಣಗೊಂಡಿದ್ದು, 7.88 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. 5.46 ಕೋಟಿ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, 87 ಲಕ್ಷ ವೆಚ್ಚದ ಕಾಮಗಾರಿ ಪ್ರಾರಂಭಿಕ ಹಂತದಲ್ಲಿದೆ. 9 ಕೋಟಿ ಕಾಮಗಾರಿ ಪ್ರಸ್ತಾವನೆ ಹಂತದಲ್ಲಿದೆ.
ಕಟ್ಟಡ ನಿರ್ಮಾಣ: ಹಳೆಯಂಗಡಿಯಲ್ಲಿ 30 ಲಕ್ಷ ಹಾಗೂ 25 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ, ಕೊಠಡಿ ನಿರ್ಮಾಣ, ಮೂಡುಬಿದಿರೆಯ ಮಿಜಾರುನಲ್ಲಿ 30 ಲಕ್ಷ ವೆಚ್ಚದಲ್ಲಿ ಹೊಸ ಸರ್ಕಾರಿ ಕಿರಿಯ ಕಾಲೇಜು ಕಟ್ಟಡ, 10 ಲಕ್ಷ ವೆಚ್ಚದಲ್ಲಿ ಮೂಲ್ಕಿಯ ಉಪ ನೋಂದಣಿ ಕಚೇರಿಯ ಹೆಚ್ಚುವರಿ ಕೊಠಡಿ ಕಟ್ಟಡ,
6.2 ಲಕ್ಷ ವೆಚ್ಚದಲ್ಲಿ ಮೂಡುಬಿದಿರೆಯ ಗ್ರಂಥಾಲಯ ಕಟ್ಟಡ ವಿಸ್ತರಣೆ, 9.8 ಲಕ್ಷ ವೆಚ್ಚದಲ್ಲಿ ಮೂಲ್ಕಿಯ ಪದವಿಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣ, 22.67 ಲಕ್ಷ ವೆಚ್ಚದಲ್ಲಿ ಚೇಳಾಯರು ಪದವಿಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
4 ಕೋಟಿ ವೆಚ್ಚದಲ್ಲಿ ಮೂಡುಬಿದಿರೆ ನ್ಯಾಯಾಲಯ ಕಟ್ಟಡ ಕಾಮಗಾರಿಯು ಪ್ರಗತಿಯಲ್ಲಿದ್ದು ರು. 96 ಲಕ್ಷ ವೆಚ್ಚದಲ್ಲಿ ನ್ಯಾಯಾಧೀಶರ ಕೊಠಡಿ ಕಾಮಗಾರಿ, 60 ಲಕ್ಷ ವೆಚ್ಚದಲ್ಲಿ ಮೂಡುಬಿದಿರೆಯಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿದೆ. ನಬಾರ್ಡ್ ಯೋಜನೆಯಲ್ಲಿ ಹಳೆಯಂಗಡಿಯ ಸಸಿಹಿತ್ಲುವಿನ ಕದಿಕೆ ಬಳಿ ಸೇತುವೆ ನಿರ್ಮಾಣಕ್ಕೆ 5 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ.