ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಪ್ಪಿನಂಗಡಿ ವಾರ್ಷಿಕ ಜಾತ್ರೆ; ಆಕರ್ಷಕ ಹೊರೆಕಾಣಿಕೆ ಮೆರವಣಿಗೆ

Mainashree
Updated On : 23 Feb 2013, 10:58 am

ಉಪ್ಪಿನಂಗಡಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಸೂರ್ಯಾಸ್ತಮಾನಕ್ಕೆ ನಡೆದ ಧ್ವಜಾರೋಹಣಾ ಕಾರ್ಯಕ್ರಮಕ್ಕೆ ಭಕ್ತರಿಂದ ಸಮರ್ಪಿಸಲಾದ ಹೊರೆಕಾಣಿಕೆಯನ್ನು  ಭವ್ಯ ಮೆರವಣಿಗೆಯಲ್ಲಿ ದೇಗುಲಕ್ಕೆ ಕೊಂಡೊಯ್ಯಲಾಯಿತು. ವರ್ಷಾವಧಿ ಜಾತ್ರೆಯಲ್ಲಿ ಊರ ಜನತೆಯನ್ನು ಮುಖ್ಯ ವಾಹಿನಿಗೆ ತಂದಿರುವ ದೇಗುಲದ ನೂತನ ವ್ಯವಸ್ಥಾಪನಾ ಸಮಿತಿಯ ಕ್ರಮದಿಂದಾಗಿ ಮೊದಲ ಬಾರಿಗೆ ಉತ್ಸವದ ಧ್ವಜಾರೋಹಣಾ ಕಾರ್ಯಕ್ಕೆ ಭಕ್ತರು ಭಾರಿ  ಪ್ರಮಾಣದಲ್ಲಿ ಹೊರೆ ಕಾಣಿಕೆ ಸಮಪಿಸಿದರು.
ಗಾಂಧಿ ಪಾರ್ಕ್‌ನಿಂದ ಹೊರೆ ಕಾಣಿಕೆ ಕೊಂಬು, ಕಹಳೆ, ಮಂಗಳವಾದ್ಯದೊಂದಿಗೆ ಉಪ್ಪಿನಂಗಡಿಯ ಪ್ರಮುಖ ಪೇಟೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ದೇಗುಲ ತಲುಪಿತು. ದ್ವಿ ಚಕ್ರ ವಾಹನಗಳು, ಆಟೋ ರಿಕ್ಷಾಗಳ ಹೊರೆ ಕಾಣಿಕೆಯಲ್ಲಿ ಆಕರ್ಷಣೆಯಾಗಿದ್ದವು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಧನ್ಯ ಕುಮಾರ್ ರೈ, ಉಷಾ ಮುಳಿಯ, ಜ್ಯೋತಿ ಶಾಸ್ತ್ರಿ, ಸುನಿಲ್, ಉತ್ಸವ ಸಮಿತಿಯ ಜಗದೀಶ್ ಶೆಟ್ಟಿ, ಬಿ. ಐತ್ತಪ್ಪ ನಾಯ್ಕ್, ಪುರುಷೋತ್ತಮ ಮುಂಗ್ಲಿಮನೆ, ಕೇಶವ ಗೌಡ ಬಜತ್ತೂರು, ಚಿದಾನಂದ ನಾಯಕ್, ಡಾ. ಕೆ.ಜಿ.ಭಟ್, ಡಾ. ಎಂ.ಎನ್.ಭಟ್, ಸಂಜೀವ ಮಠಂದೂರು, ಮನೋಜ್ ಶೆಟ್ಟಿ, ಯಟೀಶ್ ಶೆಟ್ಟಿ, ಗೋಪಾಲ ಹೆಗ್ಡೆ, ರಘುನಾಥ ರೈ, ವೆಂಕಟೇಶ್ ಭಟ್ ಮತ್ತಿತರರು ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement