ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜನರ ಭಾವನೆಗೆ ಬೆಲೆ ಕೊಡದ ಪ್ರಜಾಸತ್ತೆ: ರಾಘವೇಶ್ವರ ಶ್ರೀ

Mainashree
Updated On : 23 Feb 2013, 10:58 am

ಬಂಟ್ವಾಳ: ಗೋಹತ್ಯೆ ನಿಷೇಧಿಸುವಂತೆ 8 ಕೋಟಿ ಜನರು ಒತ್ತಾಯಿಸಿ, ಸಹಿ ಸಂಗ್ರಹಿಸಿ ದೇಶದ ಉಚ್ಚ ವ್ಯವಸ್ಥೆಗೆ ನೀಡಿದ್ದಾರೆ. ಆದರೆ, ಇಷ್ಟೂ ಜನರ ಭಾವನೆಗಳಿಗೆ ಬೆಲೆ ಕೊಡದ ಈ ರಾಷ್ಟ್ರದಲ್ಲಿ ಪ್ರಜಾಸತ್ತತೆಗೆ ಅರ್ಥವಿದೆಯೇ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಪ್ರಶ್ನಿಸಿದರು.
 ಶುಕ್ರವಾರ ಕಲ್ಲಡ್ಕ ಗೇರುಕಟ್ಟೆಯ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದಲ್ಲಿ ಶ್ರೀ ದೇವರ ಪುನಃಪ್ರತಿಷ್ಠೆ ನೆರೆವೇರಿಸಿ ಬಳಿಕ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ದೇಶದ ಅಖಂಡತೆ ಹಾಗೂ ಸಮಗ್ರತೆ ಪುರಾತನ ಕಲ್ಪನೆಯಾಗಿದ್ದು, ಭಾರತ ಎಂದು ಹೇಳಿಕೊಳ್ಳಲು ನಾಚಿಕೆ ಪಡುವ ಜನ ಇಂಡಿಯಾ ಎನ್ನುತ್ತಾರೆ. ಈ ದೇಶ ಎಂದಿಗೂ ಇಂಡಿಯಾ ಆಗಲು ಸಾಧ್ಯವಿಲ್ಲ. ಈ ಶಬ್ದವೇ ಅಪಭ್ರಂಶ. ಭಾರತದ ಪಾರ್ಥಿವ ಶರೀರವೇ ಇಂಡಿಯಾ ಎಂದರು.
ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿದರು. ಉದ್ಯಮಿಗಳಾದ ಯುದಿಷ್ಠಿರ ಶರ್ಮ, ಗಣೇಶ ಸೋಮಯಾಜಿ, ರಘು ಸೋಮಯಾಜಿ, ರಾಮಭಟ್ ನೆಡ್ಲೆ, ಗಂಗಾಧರ ರೈ ಬೋಳಂತ್ತೂರುಗುತ್ತು ಇದ್ದರು.
 ಕ್ಷೇತ್ರಕ್ಕೆ ವಿಶೇಷ ದಾನ ನೀಡಿದ ವರ್ಮುಡಿ ಪದ್ಮಿನಿ ರಾಮಭಟ್, ವಾಸ್ತುಶಿಲ್ಪಿ ಮಹೇಶ ಮುನಿಯಂಗಳ, ಉದ್ಯಮಿ ಪ್ರಸನ್ನ ಬಲ್ನಾಡು, ರಾಜ್ಯಪ್ರಶಸ್ತಿ ವಿಜೇತ ಕಲಾವಿದ ರಮೇಶ್ ಕಲ್ಲಡ್ಕ, ಕುಪ್ಳುಚಾರು ಮರಿಭಟ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ರಾಘವೇಶ್ವರ ಶ್ರೀಗಳು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. ಸಂಚಾಲಕ ಪಂಜಿಗದ್ದೆ ಶ್ಯಾಮಭಟ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ಅಬ್ರಾಜೆ ಸುಬ್ರಹ್ಮಣ್ಯ ಭಟ್ ವಂದಿಸಿದರು. ಸುಬ್ಬರಾಜ ಶಾಸ್ತ್ರಿ ಮಣಿಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement