ನಾಳೆ ಬ್ರಾಹ್ಮಣ ಒಕ್ಕೂಟ ಸ್ಥಾಪನಾ ಸಭೆ
ಮಂಗಳೂರು: ಜಿಲ್ಲೆಯಲ್ಲಿ 'ಬ್ರಾಹ್ಮಣ ಒಕ್ಕೂಟ' ರಚಿಸುವ ಸಲುವಾಗಿ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ. 24 ರಂದು ಅಪರಾಹ್ನ 3.30ಕ್ಕೆ 'ಪೂರ್ವಭಾವಿ ಸಮಾಲೋಚನಾ ಸಭೆ' ನಡೆಯಲಿದೆ.
ಉಡುಪಿ, ದ.ಕ., ಕಾಸರಗೋಡು ಜಿಲ್ಲೆಗಳ ಬ್ರಾಹ್ಮಣ ಸಮುದಾಯ, ವರ್ಗ, ಪ್ರವರ್ಗಗಳನ್ನು ಒಗ್ಗೂಡಿಸಿ ಒಕ್ಟೂಟ ರಚಿಸಿ ಬ್ರಾಹ್ಮಣ ಸಮಾವೇಶ ನಡೆಸಲು ತೀರ್ಮಾನಿಸಿದ್ದು, ಇದರ ಸಲುವಾಗಿ ಸಭೆಯನ್ನು ಕರೆಯಲಾಗಿದೆ ಎಂದು ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಸ್ಥಾನಿಕ, ಕೋಟ, ಶಿವಳ್ಳಿ, ಕೋಟೇಶ್ವರ, ಕರಾಡ, ಚಿತ್ಪಾವನ, ಹವ್ಯಕ, ದೇಶಸ್ಥ, ದ್ರಾವಿಡ ಬ್ರಾಹ್ಮಣ ಸಭಾ ಹಾಗೂ ಇನ್ನಿತರ ಬ್ರಾಹ್ಮಣ ಸಮುದಾಯದವರು, ಮಹಿಳಾ ಮತ್ತು ಯುವ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡು 'ಬ್ರಾಹ್ಮಣ ಒಕ್ಕೂಟ' ಸ್ಥಾಪನೆಗೆ ಸಹಕರಿಸುವಂತೆ ಕೋರಿಸಿದ್ದಾರೆ.