ಬಾಲಕ ನಾಪತ್ತೆ; ದೂರು
ಮಲ್ಪೆ: ಇಲ್ಲಿನ ಕೊಡವೂರು ಗ್ರಾಮದ ಕಲ್ಮಾಡಿ ಚರ್ಚ್ನ ಬಳಿಯ ಮನೆಯ ಬಾಲಕನೊಬ್ಬ ಕಾಣೆಯಾಗಿರುವ ಘಟನೆ ಫೆ. 18ರಂದು ನಡೆದಿದೆ. ಕಾಣೆಯಾಗಿರುವ ಬಾಲಕ ಪ್ರಸನ್ನ (15), ಈತ ಇಲ್ಲಿನ ನಿವಾಸಿ ಕುಶಲ ಪೂಜಾರಿ ಎಂಬವರ ಮಗ. ಈತ ಅಂದು ಸಂಜೆ ಶಾಲೆ ಮುಗಿಸಿ ಬಂದವನು ಸಮವಸ್ತ್ರವನ್ನು ಬದಲಿಸಿ ಚಾ ಕುಡಿದು ಮೂತ್ರ ವಿಸರ್ಜನೆಗಾಗಿ ಹೊರಗೆ ಹೋದವನು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬಾಲಕ ಚಿಕ್ಕಪ್ಪ ಸುರೇಶ್ ಪೂಜಾರಿ ಅವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.