ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರು ಪಾಲಿಕೆ: 23 ವಾರ್ಡ್ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ

Mainashree
Updated On : 23 Feb 2013, 11:00 am

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 23 ವಾರ್ಡ್ ಸಮಿತಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.
2 ದಿನಗಳ ಹಿಂದೆ 33 ಮಂದಿಯ ಪಟ್ಟಿ ಬಿಡುಗಡೆ ಮಾಡಿದ್ದು, ಈವರೆಗೆ 60 ವಾರ್ಡ್ ಪೈಕಿ ಒಟ್ಟು 56 ವಾರ್ಡ್‌ಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದಂತಾಗಿದೆ. ಉಳಿದ ವಾರ್ಡ್‌ಗಳಾದ ಕಾಟಿಪಳ್ಳ, ದೇರೇಬೈಲು ಪೂರ್ವ, ಪಡೀಲ್ ಮತ್ತು ಜೆಪ್ಪು ವಾರ್ಡ್‌ಗೆ ಅಭ್ಯರ್ಥಿಗಳನ್ನು ಶನಿವಾರ ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ವಕ್ತಾರ, ವಿಧಾನಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ 45 ಮಂದಿ ನಾಮಪತ್ರ ಸಲ್ಲಿಸಿದ್ದು, 60 ಮಂದಿ ಕಣದಲ್ಲಿ ಇರಲಿದ್ದಾರೆ. ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ 180 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದರು.
ಅಭ್ಯರ್ಥಿಗಳ ಪಟ್ಟಿ: ಸುರತ್ಕಲ್(ಪಶ್ಚಿಮ)-ಕಿಶೋರ್, ಕಾಟಿಪಳ್ಳ ಕೃಷ್ಣಾಪುರ-ತಿಲಕ್‌ರಾಜ್, ಇಡ್ಯ ಪಶ್ಚಿಮ-ಮಹೇಶ್ ರೈ, ಹೊಸಬೆಟ್ಟು-ಲೀಲಾವತಿ ರಮೇಶ್, ಪಣಂಬೂರು ಬೆಂಗ್ರೆ-ರಘುವೀರ, ದೇರೆಬೈಲು ಉತ್ತರ-ಮೋಹನ್ ಶೆಟ್ಟಿ, ತಿರುವೈಲು-ಹೇಮಲತಾ ರಘುಸಾಲ್ಯಾನ್, ಕದ್ರಿಪದವು-ಜಯಾನಂದ ಅಂಚನ್, ದೇರೆಬೈಲು-ವಿನಯನೇತ್ರ, ದೇರೆಬೈಲು ಪಶ್ಚಿಮ-ಶ್ರೀಲತಾ, ಚಿಲಿಂಬಿ-ಕಿಶೋರ್ ಕುಮಾರ್, ಬೋಳೂರು-ಸರೋಜಿನಿ ಕೋಟ್ಯಾನ್, ಮಣ್ಣಗುಡ್ಡೆ-ಜಯಂತಿ ಆಚಾರ್, ಮಣ್ಣಗುಡ್ಡ ಕಂಬ್ಳ-ನವೀನ್‌ಚಂದ್ರ, ಕೊಡಿಯಾಲಬೈಲ್-ಮೋಹಿತ್, ಸೆಂಟ್ರಲ್-ಪೂರ್ಣಿಮಾ, ಡೊಂಗರಕೇರಿ-ರಾಜೇಂದ್ರ ಕುಮಾರ್, ಮಿಲಾಗ್ರಿಸ್-ಲಲೇಶ್, ಜಪ್ಪಿನಮೊಗರು-ಸುರೇಂದ್ರ ಜೆ., ಅತ್ತಾವರ-ಪವನಾಕ್ಷಿ, ಹೈಗೆ ಬಜಾರ್-ದಿವ್ಯ ಪೈ, ಬೋಳಾರ-ಗೀತಾ ಬಿ.ರಾಜೇಂದ್ರ, ಬೆಂಗರೆ-ಮೀರ ಕರ್ಕೇರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement