ವರ್ಮುಡಿ ಪ್ರಬಂಧಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ
ಪುತ್ತೂರು: ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ, ಕೃಷಿ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರು ವಿವಿಧ ಕೃಷಿಯಾಧಾರಿತ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾಸಿಕಗಳಲ್ಲಿ ಪ್ರಕಟಿಸಿದ್ದ ಸಂಶೋಧನಾ ಪ್ರಬಂಧಗಳಿಗೆ ಇಂಗ್ಲೆಂಡ್, ಥೈಲಾಂಡ್, ಕೀನ್ಯಾ, ದುಬೈ ಮತ್ತು ಬಾಂಗ್ಲಾ ದೇಶಗಳ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ 'ಸಂಶೋಧನೆಗಳಿಗೆ ಪೂರಕವಾದ ಪ್ರಬಂಧ'ಗಳೆಂದು ಮಾನ್ಯತೆ ದೊರಕಿದೆ.
ವರ್ಮುಡಿ ಅವರ 'ಸಿಲ್ಕ್ ಇಂಡಸ್ಟ್ರಿ ನೀಡ್ ಟು ಬಿಕಂ ಕಾಂಪಿಟಿಟಿವ್' ಪ್ರಬಂಧಕ್ಕೆ ಇಂಗ್ಲೆಂಡಿನ ಎಸೆಕ್ಸ್ ಬ್ಯುಸಿನೆಸ್ ಸ್ಕೂಲ್ ಮತ್ತು ದುಬೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಟೆಕ್ನಾಲಜಿಗಳಲ್ಲಿ, 'ನೀಡ್ ಟು ಬೂಸ್ಟ್ ಓಕ್ರಾ ಎಕ್ಸ್ಪೋರ್ಟರ್' ಪ್ರಬಂಧಕ್ಕೆ ಥೈಲಾಂಡ್ನ ಥಾಕ್ಸನ್ ವಿವಿ ಮತ್ತು ಬಾಂಗ್ಲಾ ದೇಶದ ಚಿತ್ತಗಾಂಗ್ ವಿವಿಗಳಲ್ಲಿ ಮಾನ್ಯತೆ ದೊರಕಿದೆ.
ಈ ಬಗ್ಗೆ ಅಂತಾರಾಷ್ಟ್ರೀಯ ಮಾಸಿಕಗಳಾದ ಜರ್ನಲ್ ಆಫ್ ಎನಿಮಲ್ ಅಂಡ್ ಪ್ಲಾಂಟ್ ಸಯನ್ಸಸ್ನ ಸಂಪುಟ 12, ಸಂಚಿಕೆ 3ರಲ್ಲಿ, ಸೌತ್ ಈಸ್ಟ್ ಯುರೋಪಿಯನ್ ಜರ್ನಲ್ನ 49ನೇ ಸಂಪುಟದಲ್ಲಿ ಹಾಗೂ ಐಒಎಸ್ಆರ್ನ 2ನೇ ಸಂಪುಟದ ಆರನೇ ಸಂಚಿಕೆಯಲ್ಲಿ ಮತ್ತು ಇಂಟರ್ನ್ಯಾಶನಲ್ ಎಂಟ್ರಪ್ರನರ್ಶಿಪ್ ಫೋರಂ ಮಲೇಶಿಯಾಗಳಲ್ಲಿ ಉಲ್ಲೇಖಿಸಲಾಗಿದೆ.