ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Mainashree
Updated On : 23 Feb 2013, 10:57 am

26ರಂದು 'ಕಲಾ ಸಿಂಚನ' ಸಾಂಸ್ಕೃತಿಕ ಕಾರ್ಯಕ್ರಮ
ಬಂಟ್ವಾಳ: ಬಿ.ಸಿ.ರೋಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆಶ್ರಯದಲ್ಲಿ 'ಕಲಾ ಸಿಂಚನ' ಹೆಸರಿನ ಅಂತರ್ ಕಾಲೇಜ್ ಸಾಂಸ್ಕೃತಿಕ ಕಾರ್ಯಕ್ರಮ 26ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ. ನೃತ್ಯ, ಆಶುಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಾಗಿ ಹಲವಾರು ಸಮಿತಿಗಳನ್ನು ರಚಿಸಲಾಗಿದ್ದು, ವಿದ್ಯಾರ್ಥಿ ಪ್ರತಿನಿಧಿಗಳಿಗೆ ಜವಾಬ್ದಾರಿ ಹಂಚಲಾಗಿದೆ. ದ.ಕ.ಜಿಲ್ಲೆಯ ಕಾರ್‌ಸ್ಟ್ರೀಟ್, ಬಲ್ಮಠ, ಕಾವೂರು, ಹಳೆಯಂಗಡಿ, ವಾಮದಪದವು, ವಿಟ್ಲ, ಬೆಳ್ತಂಗಡಿ ಉಪ್ಪಿನಂಗಡಿ, ಪುತ್ತೂರು, ಬೆಟ್ಟಂಪಾಡಿ, ಬೆಳ್ಳಾರೆ, ಸುಳ್ಯ, ಸಿದ್ಧಕಟ್ಟೆ, ಪುಂಜಾಲಕಟ್ಟೆ, ಕಾಣಿಯೂರು ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. 'ಕಲಾ ಸಿಂಚನ' ಕಾರ್ಯಕ್ರಮವನ್ನು ಶಾಸಕ ಬಿ. ರಮಾನಾಥ ರೈ ಉದ್ಘಾಟಿಸುವರು. ಪ್ರಾಂಶುಪಾಲ ಪ್ರೊ.ಲೈಲಾ ಮೇರಿಜಾರ್ಜ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಡಾ. ನಾ.ದಾ.ಶೆಟ್ಟಿ ಭಾಗವಹಿಸುವರು.
ಸಮಾರೋಪ ಸಮಾರಂಭದಲ್ಲಿ ಪ್ರಾಧ್ಯಾಪಕರಾದ ಪ್ರೊ.ಸತೀಶ್ ಗಟ್ಟಿ, ಡಾ.ವಿಶ್ವನಾಥ ಬದಿಕಾನ ಹಾಗೂ ಉದ್ಯಮಿ ಶಶಾಂಕ್ ಶೆಟ್ಟಿ ಭಾಗವಹಿಸುವರು.
ಕಾಂತಾವರ: ನಾಳೆ ತಿಂಗಳ ಕಾರ್ಯಕ್ರಮ
ಮಂಗಳೂರು: ಕಾಂತಾವರ ಅಲ್ಲಮಪ್ರಭು ಪೀಠ ಸಾಂಸ್ಕೃತಿಕ ಧರ್ಮ ಸಂವರ್ಧನ ಮತ್ತು ಸೇವಾ ವಿಶ್ವಸ್ಥ ಸಮಿತಿ ವತಿಯಿಂದ 24ರಂದು ಅಪರಾಹ್ನ 3 ಗಂಟೆಗೆ ಕಾಂತಾವರ ರಥಬೀದಿಯಲ್ಲಿರುವ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದ ಪಂಪ ಮಹಾಕವಿ ಸಭಾಭವನದಲ್ಲಿ ಅನುಭವದ ನಡೆ ಅನುಭಾವದ ನುಡಿ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿ.ಎನ್. ಮೋಹನ್ ಅವರು 'ಮಾಧ್ಯಮವೆಂಬ ಕತ್ತಲೆ ಬೆಳಕು' ವಿಷಯದ ಕುರಿತು ಮಾತನಾಡಲಿದ್ದಾರೆ.
ಇಂದು ಹಸಿರು ಆರೋಗ್ಯ ಶಿಬಿರ
ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಮಂಗಳೂರು ವಿಭಾಗ ಹಾಗೂ ಸುಬ್ರಹ್ಮಣ್ಯ ಮತ್ತು ಪಂಜ ವಲಯ ಗ್ರಾಮ ಅರಣ್ಯ ಸಮಿತಿಗಳ ಸಹಯೋಗದಲ್ಲಿ ಸುಬ್ರಹ್ಮಣ್ಯದ ದೇವರಗದ್ದೆ ಔಷಧಿಯ ಸಸ್ಯ ಸಂರಕ್ಷಣಾ ಪ್ರದೇಶದಲ್ಲಿ ಹಸಿರು ಆರೋಗ್ಯ ಶಿಬಿರ ಶನಿವಾರ ಬೆಳಗ್ಗೆ ಜರುಗಲಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement