60 ವಾರ್ಡ್ಗೆ 210 ಅರ್ಜಿ
ಮಂಗಳೂರು ಮಹಾನಗರ ಪಾಲಿಕೆ 60 ಸೀಟುಗಳಿಗೆ 210 ಅರ್ಜಿ ಬಂದಿದ್ದವು, ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳಿಗೆಟಿಕೆಟ್ ನೀಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು. 40ಕ್ಕೂ ಹೆಚ್ಚು ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಗೆಲ್ಲುವ ಅವಕಾಶ ಇರುವ ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ' ಎಂದು ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಮಾತನಾಡಿ, ನಿರೀಕ್ಷೆಗೂ ಮೀರಿದ ಅರ್ಜಿಗಳು ಬಂದಿತ್ತು. ಎಲ್ಲ ವರ್ಗ, ಸಮುದಾಯದವರಿಗೂ ಸಮಾನ ಪ್ರಾಶಸ್ತ್ಯ ನೀಡಲಾಗಿದೆ. ಮಹಿಳೆಯರ ಮೀಸಲು ಹೊರತು ಪಡಿಸಿ 4 ಸೀಟು ಹೆಚ್ಚುವರಿ ನೀಡಲಾಗಿದೆ ಎಂದು ವಿವರಿಸಿದರು. 'ನಾನು ಸೂಚಿಸಿದ ಎಲ್ಲ ಅಭ್ಯರ್ಥಿಗಳನ್ನು ಚುನಾವಣೆ ಸಮಿತಿ ಆಯ್ಕೆ ಮಾಡಿದೆ, ಯಾವುದೇ ಅಸಮಧಾನ ಇಲ್ಲ' ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಹೇಳಿದರು.