ಎನ್ಎಂಸಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಇಂದು
ಸುಳ್ಯ: ಸುಳ್ಯದ ನೆಹರೂ ಸ್ಮಾರಕ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ನಿವೃತ್ತರಾಗಲಿರುವ ಪ್ರಾಂಶುಪಾಲ ಡಾ.ಎಚ್.ಎಂ. ಕುಮಾರಸ್ವಾಮಿಯವರಿಗೆ ಗೌರವಾರ್ಪಣೆ ಕಾರ್ಯಕ್ರಮ ಫೆ.24 ರಂದು ನಡೆಯಲಿದೆ.
ಸಂಘದ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ ಈ ಕುರಿತು ವಿವರ ನೀಡಿದರು. ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ಎಸ್.ಎನ್. ಮನ್ಮಥ ಉದ್ಘಾಟಿಸಲಿದ್ದಾರೆ.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಸಹ ಕಾರ್ಯದರ್ಶಿ ಕೆ.ವಿ. ಹೇಮನಾಥ ಅವರು ಡಾ.ಎಚ್.ಎಂ. ಕುಮಾರಸ್ವಾಮಿ ಅವರನ್ನು ಗೌರವಿಸಲಿದ್ದಾರೆ. ಮೈಸೂರು ಮಹಾಜನ ಕಾಲೇಜು ಪ್ರಾಂಶುಪಾಲ ಕೆ.ವಿ. ಪ್ರಭಾಕರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿ ಕೆ.ಟಿ. ವಿಶ್ವನಾಥ, ಕೋಶಾಧಿಕಾರಿ ರಾಮಚಂದ್ರ ಪಲ್ಲತಡ್ಕ, ಕಾರ್ಯದರ್ಶಿ ಅನುರಾಧ ಕುರುಂಜಿ, ಸಂಘಟನಾ ಕಾರ್ಯದರ್ಶಿ ಭವಾನಿಶಂಕರ ಅಡ್ತಲೆ, ಸಾಂಸ್ಕೃತಿಕ ಕಾರ್ಯದರ್ಶಿ ಲೋಕೇಶ್ ಪೆರ್ಲಂಪಾಡಿ, ಕ್ರೀಡಾ ಕಾರ್ಯದರ್ಶಿ ಶಿವರಾಮ ಕೇರ್ಪಳ, ಪತ್ರಿಕಾ ಪ್ರತಿನಿಧಿ ಜಯಪ್ರಕಾಶ್ ಕ್ಕುಕ್ಕೆಟಿ, ನಿರ್ದೇಶಕರಾದ ಪಿ.ಎ. ಮಹಮ್ಮದ್, ರಘುನಾಥ ಜಟ್ಟಿಪಳ್ಳ, ನೇತ್ರಾವತಿ ಎಸ್.ಎನ್., ದೇವಕಿ ಪ್ರಸನ್ನ ಇದ್ದರು.