ಗಾಂಜಾ ಮಾರಾಟ: ಸೆರೆ
ಮಂಗಳೂರು: ಉಳ್ಳಾಲ ಗಾಳಿಮರ ತೋಪಿನ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೊಯಿದ್ದೀನ್ (28)ನನ್ನು ಕರಾವಳಿ ಕಾವಲು ಪಡೆ ಪೊಲೀಸರು ಬಂಧಿಸಿದ್ದಾರೆ. ನರಿಂಗಾನ ಮಂಜನಾಡಿ ತೌಡುಗೋಳಿ ನಿವಾಸಿ. ಈತನಿಗೆ ಮೋದಿನಬ್ಬ, ಹಫೀಜ್ ಎಂಬ ಹೆಸರುಗಳಿವೆ. ಕೂಲಿ ಮತ್ತು ವಿದ್ಯಾರ್ಥಿಗಳಿಗೆ ಈತ ಗಾಂಜಾ ಮಾರಾಟ ಮಾಡುತ್ತಿದ್ದ. ಈತನಿಂದ 10 ಸಾವಿರ ಮೌಲ್ಯದ 460 ಗ್ರಾಂ ಗಾಂಜಾ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯಿಂದ ಮೊಬೈಲ್, 1,100 ವಶಪಡಿಸಿಕೊಂಡಿದ್ದಾರೆ. ಕರಾವಳಿ ಕಾವಲು ಪೊಲೀಸ್ ಪಡೆ ಠಾಣಾಧಿಕಾರಿ ವೈ.ಗಂಗೀರೆಡ್ಡಿ ನಡೆಸಿದ ದಾಳಿಯಲ್ಲಿ ಸಿಬ್ಬಂದಿ ತಾರನಾಥ್, ನಾಸಿರ್, ಲೋಕೇಶ್, ವಿಜಯ ಕೆ., ಮಹಮ್ಮದ್ ರಫೀಕ್, ನರೇಶ್ ಕುಮಾರ್, ವಾಹನ ಚಾಲಕ ಉಸ್ಮಾನ ಸಹಕರಿಸಿದ್ದರು. ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಿದ್ದು 14 ದಿನ ನ್ಯಾಯಾಂಗ ಬಂಧ ವಿಧಿಸಲಾಗಿದೆ.