ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜಿಲ್ಲೆಯಲ್ಲಿ 189 ವಾರ್ಡ್‌ಗೆ 887 ನಾಮಪತ್ರ ಸಲ್ಲಿಕೆ

Mainashree
Updated On : 24 Feb 2013, 11:13 am

ಮಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಶನಿವಾರ ಕೊನೆ ದಿನವಾಗಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆಯಲ್ಲಿ ಅಂತಿಮ ಹಂತದಲ್ಲಿ ಕಸರತ್ತಿನಲ್ಲಿ ತೊಡಗಿದ್ದವು. ಜಿಲ್ಲಾ ಚುನಾವಣಾ ಕಚೇರಿಗೆ ನಾಮಪತ್ರ ಸಲ್ಲಿಕೆ ವಿವರ ಪೂರ್ತಿ ಬರುವಾಗ ರಾತ್ರಿ 10.30 ಕಳೆದಿತ್ತು.ಜಿಲ್ಲೆಯ ಮಹಾನಗರ ಪಾಲಿಕೆ, 4 ಪುರಸಭೆ ಹಾಗೂ 2 ಪಟ್ಟಣ ಪಂಚಾಯ್ತಿಯ ಒಟ್ಟು 189 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದೆ. 6 ವಾರ್ಡ್‌ಗಳಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ. ಸ್ವೀಕೃತ ನಾಮಪತ್ರ-887, ನಾಮಪತ್ರ ಸಲ್ಲಿಸಿದವರು-571 ಮಂದಿ.
ಮಂಗಳೂರು ಮ.ನ.ಪಾ.ೆ-60 ವಾರ್ಡ್‌ಗಳಲ್ಲಿ 269 ಮಂದಿ 296 ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್-83, ಬಿಜೆಪಿ-120, ಜೆಡಿಎಸ್-53, ಸಿಪಿಐ-1, ಸಿಪಿಐಎಂ-15, ಜೆಡಿಯು-2, ಎಸ್‌ಡಿಪಿಐ-15, ಕೆಜೆಪಿ-16, ಡಬ್ಲ್ಯೂಟಿಪಿ-4, ಬಿಎಸ್‌ಆರ್-10, 319 ನಾಮಪತ್ರ ಸಲ್ಲಿಕೆಯಾಗಿದೆ.
ಮೂಡುಬಿದಿರೆ ಪುರಸಭೆ-23 ವಾರ್ಡ್ ಪೈಕಿ 1 ವಾರ್ಡ್‌ನಲ್ಲಿ ನಾಮಪತ್ರ ಸಲ್ಲಿಕೆಯಾಗಿಲ್ಲ. 89 ನಾಮಪತ್ರ ಸ್ವೀಕೃತವಾಗಿದ್ದು, 42 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್-6, ಬಿಜೆಪಿ-17, ಜೆಡಿಎಸ್-12, ಎಸ್‌ಸಿಪಿ-7, ಒಟ್ಟು 42 ನಾಮಪತ್ರ ಸಲ್ಲಿಕೆ.
ಉಳ್ಳಾಲ ಪುರಸಭೆ-27 ವಾರ್ಡ್‌ಗಳಲ್ಲೂ ನಾಮಪತ್ರ ಸಲ್ಲಿಕೆಯಾಗಿದೆ. 82 ನಾಮಪತ್ರ ಸ್ವೀಕೃತವಾಗಿದ್ದು, 101 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್-27, ಬಿಜೆಪಿ-18, ಜೆಡಿಎಸ್-18, ಸಿಪಿಐಎಂ-6, ಸ್ವತಂತ್ರರು-6, ಎಸ್‌ಡಿಪಿಐ-8, ಕೆಜೆಪಿ-4, ಒಟ್ಟು ನಾಮಪತ್ರ 82.
ಬಂಟ್ವಾಳ ಪುರಸಭೆ-23 ವಾರ್ಡ್ ಪೈಕಿ 4 ವಾರ್ಡ್‌ನಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ. 53 ಮಂದಿಯ 133 ನಾಮಪತ್ರ ಸ್ವೀಕೃತಿಯಾಗಿದೆ. ಕಾಂಗ್ರೆಸ್-16, ಬಿಜೆಪಿ-12, ಜೆಡಿಎಸ್-5, ಮುಸ್ಲಿಂ ಲೀಗ್-2, ಎಸ್‌ಡಿಪಿಐ-9, ಕೆಜೆಪಿ-3, ಒಟ್ಟು 53 ನಾಮಪತ್ರ.
ಬೆಳ್ತಂಗಡಿ ಪ.ಪಂ.-11 ವಾರ್ಡ್ ಪೈಕಿ 21 ಮಂದಿ 48 ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್-11, ಬಿಜೆಪಿ-11, ಜೆಡಿಎಸ್-3, ಸಿಪಿಐಎಂ-6, ಸ್ವತಂತ್ರರು-2, ಎಸ್‌ಡಿಪಿಐ-9.
ಸುಳ್ಯ ಪ.ಪಂ.-18 ವಾರ್ಡ್‌ಗಳಿಗೆ 40 ಮಂದಿ 83 ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್-8, ಬಿಜೆಪಿ-15, ಜೆಡಿಎಸ್-7, ಸಿಪಿಐಎಂ-1, ಸ್ವತಂತ್ರರು-7, ಕೆಜೆಪಿ-2, ಒಟ್ಟು ಸಲ್ಲಿಕೆಯಾದ ನಾಮಪತ್ರ 40.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement