ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಮಫಲಕ ಎರಡನೇ ಬಾರಿ ಕಿತ್ತೆಸೆದ ಕಿಡಿಗೇಡಿಗಳು

Mainashree
Updated On : 24 Feb 2013, 11:12 am

ಪಡುಬಿದ್ರಿ: ಇಲ್ಲಿನ ಉಚ್ಚಿಲ ಬಡಾ ಗ್ರಾಮದ ಹಿಂದೂ ರುದ್ರಭೂಮಿ ವಿವಾದವು ಮತ್ತೆ ಜೀವಂತಗೊಳಿಸಲಾಗಿದ್ದು, ಜಿಲ್ಲಾಡಳಿತ ಹಾಕಿದ ನಾಮ ಫಲಕವನ್ನು ಕಿಡಿಗೇಡಿಗಳು ಎರಡನೇ ಬಾರಿಗೆ ಕಿತ್ತೆಸೆದಿದ್ದಾರೆ.
ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ಆಡಳಿತಕ್ಕೊಳಪಟ್ಟಿರುವ ಎರ್ಮಾಳು ಮೀನುಗಾರಿಕಾ ಶಾಲಾ ಬಳಿಯಲ್ಲಿದ್ದ ಸುಮಾರು 1.56 ಎಕರೆ ವಿಸ್ತೀರ್ಣದ ರುದ್ರಭೂಮಿಯನ್ನು ಮೊಗವೀರ ಸಮಾಜದ ನಿರ್ದಿಷ್ಟ ಪಂಗಡವೊಂದು ಉಪಯೋಗಿಸುತ್ತಿತ್ತು. ಇದು ಸಾರ್ವಜನಿಕ ರುದ್ರಭೂಮಿಯಾಗಿದ್ದು, ಇದನ್ನು ಎಲ್ಲಾ ವರ್ಗದವರಿಗೆ ಉಪಯೋಗಿಸಲು ಅನುವು ಮಾಡಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದರು. ಫೆ. 15ರಂದು ಉಡುಪಿ ತಹಸೀಲ್ದಾರ್ ಅಭಿಜಿನ್ ಅವರ ನೇತೃತ್ವದಲ್ಲಿ ಈ ರುದ್ರಭೂಮಿಗೆ ಸಾರ್ವಜನಿಕ ಹಿಂದೂ ರುದ್ರಭೂಮಿ ಎಂಬ ನಾಮಫಲಕ ಅಳವಡಿಸಿದ್ದು, ಹಿಂದು ಸಮಾಜದ ಎಲ್ಲಾ ಪಂಗಡಗಳ ಉಪಯೋಗಕ್ಕೆ ಅನುಮತಿ ನೀಡಿದ್ದಾರೆ.
ಆದರೆ, ಕೆಲವು ಕಿಡಿಗೇಡಿಗಳು ಜಿಲ್ಲಾಡಳಿತ ಹಾಕಿದ ಫಲಕವನ್ನು ಅಂದೇ ರಾತ್ರಿ ಕಿತ್ತೆಸೆದಿದ್ದರು. ಈ ಬಗ್ಗೆ ಉಚ್ಚಿಲ ಬಡಗ್ರಾಮ ಪಂಚಾಯಿತಿ ಪಿಡಿಓ ಪ್ರತಾಪಚಂದ್ರ ಶೆಟ್ಟಿ ಪಡುಬಿದ್ರಿ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ನಂತರ ಪಂಚಾಯಿತಿ ಮತ್ತೇ ಒಂದೆರಡು ದಿನಗಳಲ್ಲಿ ಹೊಸ ನಾಮಫಲಕ ಅಳವಡಿಸಿತ್ತು. ಆದನ್ನೂ ಕೂಡ ಗುರುವಾರ ರಾತ್ರಿ ಕಿಡಿಗೇಡಿಗಳು ಕಿತ್ತೆಸೆದಿದ್ದಾರೆ ಹಾಗೂ ರುದ್ರಭೂಮಿಯಲ್ಲಿ ಶವ ಸುಡಲು ಕಟ್ಟಿಗೆ ಇಡುವ ಪೀಠವನ್ನು ಧ್ವಂಸ ಮಾಡಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement