ಪುತ್ತೂರು: 137 ನಾಮಪತ್ರ ಸಲ್ಲಿಕೆ
ಪುತ್ತೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಪುತ್ತೂರು ಪುರಸಭಾ ವ್ಯಾಪ್ತಿಯ 27 ವಾರ್ಡ್ಗಳಿಗೆ ಒಟ್ಟು 137 ನಾಮಪತ್ರ ಸಲ್ಲಿಕೆಯಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲಾ ವಾರ್ಡ್ಗಳಿಗೆ ತನ್ನ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕಿಳಿಸಿದೆ. ಬಿಜೆಪಿಯಿಂದ 46, ಕಾಂಗ್ರೆಸ್ನಿಂದ 44, ಜೆಡಿಎಸ್ನಿಂದ 21, ಎಸ್ಡಿಪಿಐನಿಂದ 15, ಸ್ವತಂತ್ರರು 9, ಸಿಪಿಐಎಂ ಮತ್ತು ಕೆಜೆಪಿಯಿಂದ ತಲಾ ಓರ್ವ ಅಭ್ಯರ್ಥಿಗಳು ನಾಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶನಿವಾರ ಒಟ್ಟು 66 ನಾಮಪತ್ರ ಸಲ್ಲಿಕೆಯಾಗಿದ್ದು, ಬಿಜೆಪಿಯಿಂದ 20, ಕಾಂಗ್ರೆಸ್ನಿಂದ 17, ಜೆಡಿಎಸ್ನಿಂದ 13, ಎಸ್ಡಿಪಿಐನಿಂದ 4, ಸ್ವತಂತ್ರರು 5, ಸಿಪಿಐಎಂ ಮತ್ತು ಕೆಜೆಪಿಯಿಂದ ತಲಾ ಓರ್ವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.