ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಜರಂಗದಳ ಕಟ್ಟೆಗೆ ಕಿಡಿಗೇಡಿಗಳಿಂದ ಬಣ್ಣ

Mainashree
Updated On : 24 Feb 2013, 11:15 am

ಮಂಗಳೂರು: ಮುಡಿಪು ಪಂಚಾಯ್ತಿ ಕಚೇರಿ ಎದುರುಗಡೆ ಇದ್ದ ವಿಹಿಂಪ ಬಜರಂಗದಳ ಕಟ್ಟೆಗೆ ಕಿಡಿಗೇಡಿಗಳು ಹಸಿರು ಬಣ್ಣ ಬಳಿದಿದ್ದಾರೆ. ಬಜರಂಗದಳ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ನಿರ್ಮಿಸಿದ ಭಗವಾಧ್ವಜ ಇರುವ ಕಟ್ಟೆಯಲ್ಲಿ ಹಸಿರು ಬಣ್ಣ ಬಳಿಯಲಾಗಿತ್ತು.
ಈ ಹಿಂದೆ ಎರಡು ಬಾರಿ ಇದೇ ರೀತಿಯ ದುಷ್ಕೃತ್ಯ ನಡೆಸಿ ಶಾಂತಿ ಭಂಗಕ್ಕೆ ಪ್ರಯತ್ನಿಸಲಾಗಿತ್ತು. ಶನಿವಾರ ಬೆಳಗ್ಗೆ ನೋಡಿದ ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಗಳನ್ನು ಪತ್ತೆ ಹಚ್ಚದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಸ್ಥಳಕ್ಕೆ ಎಸಿಪಿ ಟಿ.ಆರ್.ಜಗನ್ನಾಥ್ ಸ್ಥಳಕ್ಕೆ ಆಗಮಿಸಿ, ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಆರೋಪಿಗಳನ್ನು ಸೋಮವಾರದ ಒಳಗೆ ಬಂಧಿಸದಿದ್ದರೆ ಮಂಗಳವಾರ ಮುಡಿಪು ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮುಡಿಪು ಬಜರಂಗದಳ ಸಂಚಾಲಕ ಅರುಣ್ ಕುಮಾರ್ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement