ಬಾಲಕಿಗೆ ಇನ್ನೋವಾ ಡಿಕ್ಕಿ: ಸಾವು (ಸುದ್ದಿ ಸಂಕ್ಷೇಪ)
ಮಂಗಳೂರು: ಕಂಕನಾಡಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಇನ್ನೊವಾ ಕಾರು ಡಿಕ್ಕಿ ಹೊಡೆದು 12 ವರ್ಷದ ಬಾಲಕಿ ಪೂಜಾ ಮೃತಪಟ್ಟಿದ್ದಾರೆ. ಹಾವೇರಿ ಮೂಲದ ದಂಪತಿ ಕಂಕನಾಡಿ ಗುಜುರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪೂಜಾ 6ನೇ ತರಗತಿ ವಿದ್ಯಾರ್ಥಿನಿ. ಶಾಲೆ ಮುಗಿಸಿ ತಾಯಿ ಕೆಲಸ ಮಾಡುತ್ತಿದ್ದ ಗುಜುರಿ ಅಂಗಡಿಯ ಮುಂದೆ ನಿಂತಿದ್ದಳು. ತಾಯಿ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಬೇಕಿತ್ತು. ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಬಾಲಕಿಗೆ ವೇಗವಾಗಿ ಬಂದ ಇನ್ನೊವಾ ವಾಹನ ಡಿಕ್ಕಿ ಹೊಡೆಯಿತು. ತಾಯಿ ಕಣ್ಣೆದುರೇ ಈ ಘಟನೆ ನಡೆದಿದ್ದು, ತಾಯಿ ಆಕ್ರಂದನ ಕಟ್ಟೆ ಒಡೆದಿತ್ತು.