ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಭಾರತ ವಿಶ್ವದ ಜ್ಞಾನ ಶಕ್ತಿ: ರಾಮ ಸಾಮಿ

Mainashree
Updated On : 24 Feb 2013, 11:14 am

ಮಂಗಳೂರು: ಭಾರತೀಯ ವಿಜ್ಞಾನ ಸಕಾರಾತ್ಮಕ ದೃಷ್ಟಿಕೋನದಲ್ಲಿ ಬದಲಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ಹತ್ತು ವರ್ಷಗಳಲ್ಲಿ ನಾವು ವಿಶ್ವದಲ್ಲಿ ಜ್ಞಾನ ಶಕ್ತಿಯಾಗಿ ಹೊರ ಹೊಮ್ಮಲಿದ್ದೇವೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಡಾ.ಟಿ. ರಾಮಸಾಮಿ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿ ಆವರಣದಲ್ಲಿ ಶನಿವಾರ ನಡೆದ ವಿವಿ ಘಟಿಕೋತ್ಸವಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತೀಯ ವಿಜ್ಞಾನದ ಮಹಲ್ ಕಟ್ಟುವುದು ಇಂದಿನ ಯುವ ಪೀಳಿಗೆ ಕೈಯಲ್ಲಿದೆ. ಹೊಸ ಎಸ್‌ಟಿಐ ನೀತಿಯು ಉನ್ನತ ತಂತ್ರಜ್ಞಾನಕ್ಕಾಗಿ ವಿಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರ ಕೇಂದ್ರೀಕೃತವಾಗಿದೆ ಎಂದರು.
ಈಗಿನ ಪೀಳಿಗೆ ಭಾರತದ ಉತ್ತಮ ಪೀಳಿಗೆಯಾಗಿದೆ. ಏಕೆಂದರೆ ಇವರೆಲ್ಲರೂ ಉದಾರಿಕರಣ (1991) ಬಳಿಕ ಹುಟ್ಟಿದವರು. ಆದರೂ ಉನ್ನತ ಶಿಕ್ಷಣದಲ್ಲಿ ಭಾರತೀಯರು ಪ್ರಮಾಣ ಶೇ.19. ಇದು ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಇಮ್ಮಡಿಯಾಗಿದೆ ನಿಜ, ಆದರೆ  ವಿಶ್ವಮಟ್ಟದ ಸರಾಸರಿಯಿಂದ ಹಿಂದೆ ಇದ್ದೇವೆ. ಮುಂದಿನ 7 ವರ್ಷಗಳಲ್ಲಿ ವಿಶ್ವಮಟ್ಟವನ್ನು ಮುಟ್ಟಲಿದ್ದೇವೆ ಎಂದರು.
 ಮಕ್ಕಳ ಭವಿಷ್ಯ ರೂಪಿಸುವ ಪ್ರಾಥಮಿಕ ಶಿಕ್ಷಣ ಇನ್ನಷ್ಟು ಸಂಪನ್ಮೂಲ ಭರಿತವಾಗಬೇಕಿದೆ. ಪ್ರಾಥಮಿಕ ಶಿಕ್ಷಕರಿಗೆ ನೀಡುವ ಸಂಭಾವನೆಯನ್ನು ಹೆಚ್ಚಿಸಬೇಕು ಎಂದು ಅಭಿಪ್ರಾಯ ಪಟ್ಟರು.
 ದೇಶದಲ್ಲಿ 600 ವಿಶ್ವವಿದ್ಯಾಲಯಗಳಿದ್ದು, 44 ವಿವಿಗಳು ಮಾತ್ರ ವಿಜ್ಞಾನ ಸಂಶೋಧನೆ ನಡೆಸುತ್ತಿವೆ. ಇದರಲ್ಲಿ ಮಂಗಳೂರು ವಿವಿಯೂ ಒಂದು ಹೇಳಲು ಸಂತಸವಾಗುತ್ತದೆ ಎಂದರು.
 ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಹಾಕಿ ಪಟು, ಸಮಾಜ ಸೇವಕ ಎ.ಬಿ. ಸುಬ್ಬಯ್ಯ ಅವರಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
 84 ಮಂದಿಗೆ ಡಾಕ್ಟರೇಟ್, 36ಮಂದಿ ರ್ಯಾಂಕ್ ವಿಜೇತರಿಗೆ ಪದವಿ ಪ್ರದಾನ ಮಾಡಿದರು. ಕುಲಪತಿ ಟಿ.ಸಿ. ಶಿವಶಂಕರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಜಿಸ್ಟ್ರಾರ್ ಪಿ.ಎಸ್. ಯಡಪಡಿತ್ತಾಯ, ಪರೀಕ್ಷಾಂಗ ಕುಲಸಚಿವ ನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement