ಸಾರಿಗೆ ಸಂಸ್ಥೆ ಬಸ್ ಧಾವಂತಕ್ಕೆ 2 ಬಲಿ
ಮಂಗಳೂರು: ಪಂಪ್‌ವೆಲ್ ಬಳಿ ಶನಿವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ ಧಾವಂತಕ್ಕೆ ಬೈಕ್ ಸವಾರ ಮತ್ತು ಪಾದಚಾರಿ ಬಲಿಯಾಗಿದ್ದಾರೆ. ಸ್ಕೂಟರ್ ಮತ್ತು ರಿಕ್ಷಾಗಳಿಗೂ ಸರಣಿ ಡಿಕ್ಕಿ ಹೊಡೆದ ಬಸ್ ಮತ್ತಿಬ್ಬರನ್ನು ಗಾಯಗೊಳಿಸಿದೆ.
ಬಜಾಲ್ ನಿವಾಸಿ ರಿತೇಶ್ ಮೊಂತೆರೊ (28), ಬಿ.ಸಿ.ರೋಡ್ ರಾಜೇಶ್ (52)ಮೃತಪಟ್ಟವರು. ರಿತೇಶ್ ಹಿರೊಹೋಂಡ ಬೈಕ್‌ನಲ್ಲಿ ಹೋಗುತ್ತಿದ್ದರೆ, ರಾಜೇಶ್ ನಡೆದುಕೊಂಡು ಹೋಗುತ್ತಿದ್ದರು. ಬಸ್ ಹಾಸನದತ್ತ ತೆರಳುತ್ತಿತ್ತು. ವೇಗವಾಗಿ ಬಂದ ಬಸ್ ಓವರ್‌ಟೇಕ್ ಮಾಡುವ ಧಾವಂತದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಯಿತು, ಮುಂದುವರಿದು ಪಾದಚಾರಿಗೂ ಡಿಕ್ಕಿಹೊಡೆದು, ಆಟೋರಿಕ್ಷಾ, ಸ್ಕೂಟರ್ ಮತ್ತು ಕಂಬಕ್ಕೆ ಡಿಕ್ಕಿ ಹೊಡೆಯಿತು. ಬೈಕ್ ಸವಾರ ಮತ್ತು ಪಾದಚಾರಿ ಸ್ಥಳದಲ್ಲಿಯೇ ಸಾವನಪ್ಪಿದರು. ಸ್ಕೂಟರ್ ಸವಾರ ಗಂಭೀರ ಗಾಯಗೊಂಡಿದ್ದಾರೆ.
ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿ ಬಸ್ ಚಾಲಕನನ್ನು ಬಂಧಿಸಿದ್ದಾರೆ.