ಇಂದು ಸ್ವಯಂಸೇವಕರ ಹುದ್ದೆಗೆ ನೇರ ಸಂದರ್ಶನ
ಮಂಗಳೂರು: ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಜಿಲ್ಲಾ ನೆಹರು ಯುವಕೇಂದ್ರದಲ್ಲಿ ರಾಷ್ಟ್ರೀಯ ಯುವಪಡೆಯ ಸ್ವಯಂಸೇವಕರ ಹುದ್ದೆಯ ನೇರ ಸಂದರ್ಶನ ಫೆ. 25 ಮಧ್ಯಾಹ್ನ 2ಕ್ಕೆ ನಡೆಯಲಿದೆ. ಜಿಲ್ಲೆಯ ಆಯಾ ತಾಲೂಕಿನಿಂದ ತಲಾ ಇಬ್ಬರು ಯುವ ಸ್ವಯಂ ಸೇವಕರು ಹಾಗೂ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಕಂಪ್ಯೂಟರ್ ಅನುಭವಿರುವ ಇಬ್ಬರು ಯುವಕರನ್ನು ನಿಯೋಜಿಸಲಾಗುವುದು.
ಅರ್ಹತೆ: ಹತ್ತನೇ ತರಗತಿಗಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರಬೇಕು. ಆಯ್ಕೆ ಮಾಡುವ ತಾಲೂಕಿನ ನಿವಾಸಿಯಾಗಿರಬೇಕು, ಮಂಡಳಿಯ ಸದಸ್ಯರಿಗೆ ಆದ್ಯತೆ. ಸ್ವಯಂ ಸೇವಕರನ್ನು ಒಂದು ವರ್ಷದ ಅವಧಿಗೆ ನೇಮಿಸಲಾಗುವುದು ಎಂದು ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಸಿ.ಜೆ.ಎಫ್. ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.