ಗೇರುಕಟ್ಟೆ: ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ಬಂಟ್ವಾಳ (ದಿ.ನೀರ್ಪಾಜೆ ಭೀಮಭಟ್ಟ ಸಭಾಂಗಣ, ದಿ.ಕೆಲಿಂಜ ಸೀತಾರಾಮ ಆಳ್ವ ವೇದಿಕೆ): ಕಲ್ಲಡ್ಕ ಸಮೀಪದ ಗೇರುಕಟ್ಟೆ ಶ್ರೀಉಮಾ ಶಿವ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆದ ಬಂಟ್ವಾಳ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ರಾತ್ರಿ ಸಮಾಪನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಶಂಕರ ಭಟ್ ಪೂಕಳ (ಸಾಹಿತ್ಯ), ರಾಮಚಂದ್ರ ಆಚಾರ್ಯ (ಕಾಷ್ಠಶಿಲ್ಪಿ), ಬಿ.ಟಿ. ನಾರಾಯಣ ಭಟ್ (ಸಹಕಾರ), ನಿಡ್ಲೆ ಮಹಾಭಲೇಶ್ವರ ಭಟ್ (ಕೃಷಿ ಸಂಶೋಧನೆ), ಶಂಕರ್ ವಿ. ಬೋಳಂತೂರು (ಕ್ರೀಡೆ), ನಾರಾಯಣ ನಾಯಕ್ (ಶಿಕ್ಷಣ), ಗಣಪತಿ ಭಟ್ ಪದ್ಯಾಣ (ಗಮಕ), ಬಾಳಪ್ಪ ಪಂಡಿತ್ (ನಾಟಿ ವೈದ್ಯ), ತನಿಯಪ್ಪ ಕಲ್ಲೆಂಚಿಪಾದೆ (ಜಾನಪದ), ಎನ್. ಸುಲೈಮಾಣ್ (ಸಮಾಜಸೇವೆ), ಪಾ. ಅನಂತರಾಜ ಇಂದ್ರ (ಇತಿಹಾಸ) ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಸನ್ಮಾನಿಸಿದರು. ಯಕ್ಷಗಾನ ಅರ್ಥಧಾರಿ, ಹಿರಿಯ ಸಾಹಿತಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಬಿ.ತಮ್ಮಯ್ಯ, ಡಾ. ವರದರಾಜ ಚಂದ್ರಗಿರಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸಿ.ವಿ. ಗೋಪಾಲಕೃಷ್ಣ ಭಟ್, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯಾನಂದ ಪೆರಾಜೆ ಇದ್ದರು. ವಿ.ಸುಬ್ರಮಣ್ಯ ಭಟ್ ಸನ್ಮಾನಿತರನ್ನು ಪರಿಚಯಿಸಿದರು. ಎ.ಪಿ. ರಾವ್ ಸ್ವಾಗತಿಸಿದರು. ಮಂಜು ವಿಟ್ಲ ವಂದಿಸಿದರು. ಬಿ.ರಾಮಚಂದ್ರ ರಾವ್ ನಿರೂಪಿಸಿದರು.