ಬೆಳ್ತಂಗಡಿ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬೆಳ್ತಂಗಡಿ: ಭಾರತೀಯ ಜನತಾ ಪಕ್ಷದ ವತಿಯಿಂದ ಇಲ್ಲಿನ ಪಟ್ಟಣ ಪಂಚಾಯಿತಿನ 11 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 1ನೇ ವಾರ್ಡ್ನ ಸಾಮಾನ್ಯ ಸ್ಥಾನಕ್ಕೆ ಸುಬ್ರಹ್ಮಣ್ಯ ಭಟ್, 2ನೇ ವಾರ್ಡ್ನ ಹಿಂದುಳಿದ ಎ ಸ್ಥಾನಕ್ಕೆ ಶಿವಪ್ರಸಾದ್, 3 ನೇ ವಾರ್ಡ್ನ ಸಾಮಾನ್ಯ ಸ್ಥಾನಕ್ಕೆ ಶಂಕರ ಹೆಗ್ಡೆ, 4ನೇ ವಾರ್ಡ್ನ ಸಾಮಾನ್ಯ ಸ್ಥಾನಕ್ಕೆ ಬಿ. ಕೇಶವ ಪೈ., 5 ನೇ ವಾರ್ಡ್ನ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಶರತ್ ಶುಭ, 6 ನೇ ವಾರ್ಡ್ನ ಹಿಂದುಳಿದ ಮಹಿಳಾ ಎ ಸ್ಥಾನಕ್ಕೆ ವೀಣಾ ವಿ. ಕುಮಾರ್, 7 ನೇ ವಾರ್ಡ್ನ ಹಿಂದುಳಿದ ಮಹಿಳಾ ಬಿ ಸ್ಥಾನಕ್ಕೆ ಸುಜಾತ, 8 ನೇ ವಾರ್ಡ್ನ ಪ.ಜಾತಿ ಮಹಿಳಾ ಸ್ಥಾನಕ್ಕೆ ಅನಿತಾ, 9 ನೇ ವಾರ್ಡ್ನ ಹಿಂದುಳಿದ ಮಹಿಳಾ ಸ್ಥಾನಕ್ಕೆ ರಾಜೇಶ್, 10 ನೇ ವಾರ್ಡ್ನ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಯಮುನಾ ಹಾಗೂ 11ನೇ ವಾರ್ಡ್ನ ಪ.ಪಂ. ಮಹಿಳಾ ಸ್ಥಾನಕ್ಕೆ ಲಲಿತಾ ಸ್ಪರ್ಧಿಸಲಿದ್ದಾರೆ.