ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶೀಘ್ರದಲ್ಲಿ ಆಯುರ್ವೇದ, ಯುನಾನಿ ವೈದ್ಯರ ಆನ್‌ಲೈನ್ ರಿಜಿಸ್ಟ್ರೇಶನ್

Mainashree
Updated On : 25 Feb 2013, 11:00 am

'ಪ್ರಕಲ್ಪಂ 2012' ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ

ಉಡುಪಿ: ದೇಶದಲ್ಲಿ ಯಾವುದೇ ವೈದ್ಯಕೀಯ ಮಂಡಳಿಯಲ್ಲಿಲ್ಲದ, ದೇಶದಲ್ಲಿಯೇ ಮೊದಲ ಬಾರಿಗೆ ಮಾ. 8ರಂದು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಚಿಕಿತ್ಸಾ ಪದ್ಧತಿ ಮಂಡಳಿಯಲ್ಲಿ ಆಯುರ್ವೇದ ಮತ್ತು ಯುನಾನಿ ವೈದ್ಯರ ಆನ್‌ಲೈನ್ ಬಯೋವುಟ್ರಿಕಲ್ ರಿಜಿಸ್ಟ್ರೇಶನ್ ಆರಂಭವಾಗಲಿದೆ. ಇದರಿಂದ ರಾಜ್ಯದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಸರಳವಾಗಲಿದೆ ಎಂದು ಮಂಡಳಿ ಅಧ್ಯಕ್ಷ ಡಾ. ಸತ್ಯಮೂರ್ತಿ ಭಟ್ ತಿಳಿಸಿದ್ದಾರೆ.
ಭಾನುವಾರ ಇಲ್ಲಿನ ಉದ್ಯಾವರ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಮಾತಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥ 'ಪ್ರಕಲ್ಪಂ 2012' ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನಕಲಿ ಅಸಾಧ್ಯ: ಎಲ್ಲಾ ಪದ್ಧತಿಯ ವೈದ್ಯರಂತೆ ಆಯುರ್ವೇದ- ಯುನಾನಿ ನೈದ್ಯರು ತಮ್ಮ ವೃತ್ತಿ ಆರಂಭಿಸುವ ಮೊದಲು ಮಂಡಳಿಯಲ್ಲಿ  ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಇದೀಗ ಆನ್‌ಲೈನ್ ನೋಂದಣಿ ಸಂದರ್ಭದಲ್ಲಿ 9 ಭದ್ರತಾ ಲಕ್ಷಣಗಳನ್ನು ಹೊಂದಿರುವ ಪ್ರಮಾಣ ಪತ್ರ ನೀಡಲಾಗುತ್ತಿದೆ. ಯಾರೂ ಕೂಡ ಅದನ್ನು ನಕಲಿಸಲು ಸಾಧ್ಯವಿಲ್ಲ. ಅಭ್ಯರ್ಥಿಯ ಬೆರಳಚ್ಚನ್ನು ಪಡೆದುಕೊಂಡು ನೋಂದಣಿ ಮಾಡಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಹಿಂದಿನಂತೆ ನೋಂದಣಿಗಾಗಿ ಮಂಡಳಿಗೆ ಹಲವಾರು ಬಾರಿ ಅಲೆಯುವ ಅಗತ್ಯವಿಲ್ಲ. ಎಲ್ಲಾ ಮಾಹಿತಿಗಳನ್ನು ಆನ್‌ಲೈನ್ ಮೂಲಕ ಕಳುಹಿಸಿ, ನಂತರ ಮಂಡಳಿಗೆ ಬಂದು ಬೆರಳಚ್ಚು ನೀಡಿ ಕೇವಲ 15 ನಿಮಿಷಗಳಲ್ಲಿ ಸೇವೆ ಪಡೆದುಕೊಳ್ಳಬಹುದು. ಅಲ್ಲದೇ ಆನ್‌ಲೈನ್‌ನಲ್ಲಿಯೇ ಪ್ರೀ ಪ್ರಾಕ್ಟಿಕಲ್ ಸರ್ಟಿಫಿಕೇಟ್ ಕೂಡ ಪಡೆದುಕೊಳ್ಳುವ ವ್ಯವಸ್ಥೆಗೂ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ಪ್ರೊ.ಯು.ಎನ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಪ್ರಸನ್ನ ಎನ್. ರಾವ್  ಮುಖ್ಯ ಅತಿಥಿಗಳಾಗಿದ್ದರು.
ಪ್ರೊ. ಪ್ರಭಾಕರ ಉಪಾಧ್ಯಾಯ ರೆಂಜಾಳ ಸ್ವಾಗತಿಸಿದರು. ಪ್ರೊ. ಟಿ. ಶ್ರೀಧರ ಬಾಯರಿ ವಂದಿಸಿದರು. ಡಾ. ರವೀಂದ್ರ ಅಂಗಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement