ಶೇ.50 ಮೊತ್ತ ಕಲಾಪೋಷಣೆಗೆ: ಡಾ.ಚಿನ್ನಪ್ಪ ಗೌಡ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ತನ್ನ ಆದಾಯದ ಬಡ್ಡಿಯಲ್ಲಿ ಶೇ.50ನ್ನು ಕಲಾಪೋಷಣೆಗೆ ವಿನಿಯೋಗಿಸುತ್ತಿದೆ ಎಂದು ವಿವಿ ಯಕ್ಷಗಾನ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಚಿನ್ನಪ್ಪ ಗೌಡ ಹೇಳಿದ್ದಾರೆ.
ಕಲಾ ಸಂಗಮ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಭಾನುವಾರ ಪುರಭವನದಲ್ಲಿ ನಡೆದ 'ಯಕ್ಷಸಿರಿ' ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿ, ಶುದ್ಧ ಕನ್ನಡ ಮಾತನಾಡುವುದನ್ನು ಯಕ್ಷಗಾನದಲ್ಲಿ ಮಾತ್ರ ಕಾಣಬಹುದು. ಮಕ್ಕಳಿಗೆ ಚಾರಿತ್ರಿಕ ಸಂಗತಿಗಳನ್ನು ತಿಳಿಸಬೇಕು ಎಂದರು.
ಮಾಜಿ ಸಚಿವ ಅಮರನಾಥ ಶೆಟ್ಟಿ, ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಎನ್.ಹೆಗಡೆ, ಸಂಘಟಕ ಕೇಶವ ಹೆಗಡೆ ಹಾಜರಿದ್ದರು.