ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸರಳ ಕನ್ನಡಕ್ಕೆ ಅನುವಾದಿತಚತುರ್ವೇದ ಗ್ರಂಥ

Mainashree
Updated On : 25 Feb 2013, 11:00 am

ಬೆಳ್ತಂಗಡಿ: ಚತುರ್ವೇದಗಳನ್ನು ಸರಳ ಕನ್ನಡಕ್ಕೆ ಅನುವಾದಿಸಿದ 20 ಸಂಪುಟಗಳುಳ್ಳ ಬೃಹತ್ ಗ್ರಂಥ ಸಿದ್ಧಗೊಳ್ಳುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ವೇದಭಾಷ್ಯ ಪ್ರಕಾಶನ ಸಮಿತಿ ಟ್ರಸ್ಟ್, ಬೆಂಗಳೂರು ವತಿಯಿಂದ ಕೆಲವು ವರ್ಷಗಳಿಂದ ಚತುರ್ವೇದಗಳ ಕುರಿತು ಅಧ್ಯಯನ ಮಾಡಿ ಸಂಸ್ಕೃತದಲ್ಲಿರುವ ಈ ಮೂಲ ವೇದಗಳನ್ನು ಸರಳ ಕನ್ನಡಕ್ಕೆ ಅನುವಾದಿಸಿ ಈಗಾಗಲೇ 18 ಸಂಪುಟಗಳನ್ನು ಪ್ರಕಟಿಸಲಾಗಿದೆ. (ಒಟ್ಟು 20 ಸಂಪುಟಗಳು). ಒಂದೊಂದು ಸಂಪುಟದ ಮುದ್ರಣಗೊಂಡ ಪ್ರತಿಗಳು 750 ಪುಟಗಳನ್ನು ಹೊಂದಿದೆ. ಆಸಕ್ತರಿಗೆ ಕಡಿಮೆ ಬೆಲೆಯಲ್ಲಿ ನೀಡುವ ಉದ್ದೇಶದಿಂದ ಈ ಅಮೂಲ್ಯ ಮತ್ತು ಬೃಹತ್ ಗ್ರಂಥದ 20 ಸಂಪುಟಗಳ ಬೆಲೆ 6000 ಎಂದು ನಿಗದಿಪಡಿಸಲಾಗಿದೆ.
ಶತಾಯುಷಿ ಪಂ. ಸುಧಾಕರ ಚತುರ್ವೇದಿ ಸಂಪಾದಕತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಯೋಗದೊಂದಿಗೆ ಈ ಬೃಹತ್ ಕಾರ್ಯ ನಿರ್ವಹಿಸಲಾಗಿದೆ. ಅಲ್ಲದೆ ಈ ಕಾರ್ಯಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ವಿಶೇಷ ಅನುದಾನ ನೀಡಿದ್ದಾರೆ.
ಆಸಕ್ತರು-ಫೆ.28 ರೊಳಗೆ: ಎಸ್. ನಂಜುಡಪ್ಪ ಕಾರ್ಯದರ್ಶಿ, ವೇದಭಾಷ್ಯ ಪ್ರಕಾಶನ ಸಮಿತಿ ಟ್ರಸ್ಟ್, ಬೆಂಗಳೂರು-560009 (ದೂರವಾಣಿ- 22342715, ಮೊಬೈಲ್ ಸಂಖ್ಯೆ- 9986666809) ಇವರನ್ನು ಸಂಪರ್ಕಿಸಿ ಮುಂಗಡ 6000ನ್ನು ಮೇಲಿನ ವಿಳಾಸಕ್ಕೆ ಡಿ.ಡಿ. ಮುಖಾಂತರ ಕಳುಹಿಸಿ ಗ್ರಂಥಗಳನ್ನು ಸಂಗ್ರಹಿಸಿಕೊಳ್ಳುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement