ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Mainashree
Updated On : 25 Feb 2013, 10:59 am

ಹೆಬ್ರಿ ತಾಲೂಕು ರಚನೆ; ಹೈಕೋರ್ಟ್‌ಗೆ ಮೊರೆ
ಹೆಬ್ರಿ:  ತಾಲೂಕು ರಚನಾ ಆಯೋಗವು ಹೆಬ್ರಿಯನ್ನು ತಾಲೂಕಾಗಿ ಘೋಷಣೆ ಮಾಡಿದ ಬಳಿಕವೂ ಸರ್ಕಾರ ಹೆಬ್ರಿಯನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ತಾಲೂಕು ರಚನಾ ಹೋರಾಟ ಸಮಿತಿಯ ದ್ವಿತೀಯ ಸುತ್ತಿನ ಸಭೆ ಹೆಬ್ರಿಯ ಅನಂತಪದ್ಮನಾಭ ಸನ್ನಿಧಿಯಲ್ಲಿ ಭಾನುವಾರ ನಡೆಯಿತು. ಶಾಸಕ ಗೋಪಾಲ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆಬ್ರಿಯನ್ನು ತಾಲೂಕಾಗಿ ಮಾಡದಿರುವ ಬಗ್ಗೆ ಕಾನೂನು ಹೋರಾಟಕ್ಕೆ ರಾಜ್ಯ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಯಿತು. ಬಳಿಕ ಏ.1ರಿಂದ ಸರ್ಕಾರ ಹೆಬ್ರಿಯನ್ನು ತಾಲೂಕಾಗಿ ಘೋಷಿಸುವ ತನಕ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸತ್ಯಾಗ್ರಹ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ಹೆಬ್ರಿ ತಾಲೂಕು ವಿಚಾರದಲ್ಲಿ ರಾಜಕೀಯ ಬಿಟ್ಟು ಸಮಿತಿಯ ಹೋರಾಟದಲ್ಲಿ ಕೈ ಜೋಡಿಸಿ ಎಂದು ಸಮಾನಮನಸ್ಕರ ಹೆಸರಿನಲ್ಲಿ ಪ್ರತ್ಯೇಕ ಸಮಿತಿ ರಚಿಸಿದ ತಂಡಕ್ಕೆ ಭಂಡಾರಿ ಕರೆ ನೀಡಿದರು.
ಇಂದು ಎಸ್‌ಸಿಡಿಸಿಸಿ ಬ್ಯಾಂಕ್ ಕಲ್ಲಡ್ಕ ಶಾಖೆ ಸ್ಥಳಾಂತರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕಲ್ಲಡ್ಕ ಶಾಖೆ ಸ್ಥಳಾಂತರ ಸಮಾರಂಭ ಫೆ.25ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಸ್ಥಳಾಂತರಗೊಳ್ಳುವ ಶಾಖೆಯನ್ನು ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.
ಇಂದು, ನಾಳೆ ಚರ್ಮ ತಪಾಸಣಾ ಶಿಬಿರ
ಮಂಗಳೂರು: ಡಾ.ಜೆ.ಎನ್.ಶೆಟ್ಟಿ ಮೆಮೋರಿಯಲ್ ಚರ್ಮ ಉಚಿತ ತಪಾಸಣಾ ಶಿಬಿರ ಸೋಮವಾರ ಮತ್ತು ಮಂಗಳವಾರ ಸುರತ್ಕಲ್‌ನಲ್ಲಿ ನಡೆಯಲಿದೆ.  ಡಾ.ಜೆ.ಎನ್.ಶೆಟ್ಟಿ ಸ್ಮಾರಕ ಕಟ್ಟಡದಲ್ಲಿ 9ರಿಂದ 1ಗಂಟೆವರಗೆ ನಡೆಯುವ ಶಿಬಿರದಲ್ಲಿ ಚರ್ಮ ತಪಾಸಣೆ ಮಾಡಿ ಔಷಧ ನೀಡಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement