ಸುಧಾಕರ ರಾವ್ ಆರ್ಯಾಪು ಆಯ್ಕೆ
ಪುತ್ತೂರು: ದ.ಕ. ಜಿಲ್ಲಾ ಪಂಚಾಯಿತಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಂಟ್ಯಾರ್ ಇಲ್ಲಿನ ನೂತನ ಎಸ್ಡಿಎಂಸಸಿ ಅಧ್ಯಕ್ಷರಾಗಿ ಪತ್ರಕರ್ತ ಸುಧಾಕರ ರಾವ್ ಆರ್ಯಾಪು ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕಲಾವತಿ ರೈ ಮಲಾರ್, ಸದಸ್ಯರಾಗಿ ಮಹಮ್ಮದ್ ಮಲಾರ್, ಶಶಿಕಲಾ ಆಚಾರ್ಯ ಮಲಾರ್, ಇಸ್ಮಾಯಿಲ್ ಮರಿಕೆ, ಗಂಗಾಧರ ಆಚಾರಿ ಮಲಾರ್, ಸಲೀಂ ಸಂಟ್ಯಾರ್, ಶೋಭಾಪ್ರಭು ಸಂಟ್ಯಾರ್, ಶಕುಂತಲಾ ಪ್ರಭು ಸಂಟ್ಯಾರ್, ಕಿರಣ್ ಡಿ' ಸೋಜ ಮಲಾರ್, ರಾಧಿಕಾ ಮರಿಕೆ, ಕುಸುಮ ಮಲಾರ್, ಮರಿಯಮ್ಮ ನೀರ್ಕಜೆ ಆಯ್ಕೆಯಾದರು.
ಜ. 30ರಂದು ಗ್ರಾ.ಪಂ. ಅಧ್ಯಕ್ಷ ವಿಜಯಾ ಬಿ.ಎಸ್. ಉಪಸ್ಥಿತಿಯಲ್ಲಿ ನೂತನ ಎಸ್ಡಿಎಂಸಿ ರಚನೆಯಾಯಿತು. ಶಿಕ್ಷಣ ಸಂಯೋಜಕ ಹುಕ್ರ, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಹಮೀದಾಲೀಸ್ ಹಂಟ್ಯಾರ್, ಶಿಕ್ಷಣ ತಜ್ಞ ವಿಠಲ ರೈ ಮಲಾರ್, ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಇದ್ದರು.