ಸ್ಥಳೀಯ ಸಂಸ್ಥೆಗಳ ಚುನಾವಣೆ: ಒಟ್ಟು 976 ನಾಮಪತ್ರ ಸ್ವೀಕೃತ
ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯ 189 ವಾರ್ಡ್ಗಳಿಂದ ಒಟ್ಟು 976 ನಾಮಪತ್ರ ಸ್ವೀಕೃತವಾಗಿದೆ.
ಮಂಗಳೂರು ಮಹಾನಗರಪಾಲಿಕೆ: 60 ವಾರ್ಡಿಗಳಿಂದ ಒಟ್ಟು 369 ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್- 83, ಬಿಜೆಪಿ- 120, ಜೆಡಿಎಸ್- 53, ಸಿಪಿಐ- 1, ಸಿಪಿಐ(ಎಂ)- 15, ಸ್ವತಂತ್ರರು- 50, ಜೆಡಿ(ಯು)- 2, ಕೆಜಿಪಿ- 16, ಬಿಎಸ್ಆರ್ ಕಾಂಗ್ರೆಸ್-10, ಡಬ್ಲ್ಯೂಪಿಐ- 4, ಎಸ್ಡಿಪಿಐ- 26.
ಮೂಡುಬಿದಿರೆ ಪುರಸಭೆ: 23 ವಾರ್ಡ್ಗಳಲ್ಲಿ ಒಟ್ಟು 88 ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್-25, ಬಿಜೆಪಿ- 29, ಜೆಡಿಎಸ್- 23, ಸಿಪಿಐ(ಎಂ)- 3, ಸ್ವತಂತ್ರರು- 8 ಮಂದಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಉಳ್ಳಾಲ ಪುರಸಭೆ: 27 ವಾರ್ಡಿಗಳಿಂದ ಒಟ್ಟು 113 ಮಂದಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್-27, ಬಿಜೆಪಿ- 26, ಜೆಡಿಎಸ್- 24, ಸಿಪಿಐ(ಎಂ)- 7, ಸ್ವತಂತ್ರರು-9, ಕೆಜಿಪಿ-4, ಎಸ್ಡಿಪಿಐ-16 ಮಂದಿ ಸ್ಪರ್ಧಿಸುತ್ತಾರೆ.
ಬಂಟ್ವಾಳ ಪುರಸಭೆ: 23 ವಾರ್ಡಿನಿಂದ ಒಟ್ಟು 133 ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್- 39, ಬಿಜೆಪಿ-41, ಜೆಡಿಎಸ್- 9, ಬಿಎಸ್ಪಿ- 2, ಸಿಪಿಐ(ಎಂ)- 2, ಸ್ವತಂತ್ರರು- 10, ಸಿಪಿಐ(ಎಂ.ಎಲ್)- 2, ಕೆಜೆಪಿ- 5, ಎಸ್ಡಿಪಿಐ- 23 ಮಂದಿ ಸ್ಪರ್ಧಿಸುತ್ತಿದ್ದಾರೆ.
ಪುತ್ತೂರು ಪುರಸಭೆ: ಒಟ್ಟು 27 ವಾರ್ಡಿಗಳಲ್ಲಿ 137 ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್- 44, ಬಿಜೆಪಿ- 46, ಜೆಡಿಎಸ್- 21, ಸಿಪಿಐ(ಎಂ)- 1, ಸ್ವತಂತ್ರರು- 9, ಕೆಜೆಪಿ- 1, ಎಸ್ಡಿಪಿಐ- 15 ಮಂದಿ ಸ್ಪರ್ಧಿಸುತ್ತಿದ್ದಾರೆ.
ಬೆಳ್ತಂಗಡಿ ಪಟ್ಟಣ ಪಂಚಾಯ್ತಿ: 11ವಾರ್ಡ್ಗಳಲ್ಲಿ 53 ನಾಮಪತ್ರಗಳು ಸಲ್ಲಿಕೆಯಾಗಿದೆ. ಕಾಂಗ್ರೆಸ್- 15, ಬಿಜೆಪಿ- 15, ಜೆಡಿಎಸ್- 3, ಸಿಪಿಐ(ಎಂ)- 7, ಸ್ವತಂತ್ರರು- 2, ಎಸ್ಡಿಪಿಐ- 11 ಮಂದಿ ಸ್ಪರ್ಧಿಸುತ್ತಿದ್ದಾರೆ.
ಸುಳ್ಯ ಪಟ್ಟಣ ಪಂಚಾಯ್ತಿ: 18 ವಾರ್ಡಿನಿಂದ 83 ನಾಮಪತ್ರ ಸಲ್ಲಿಸಲಾಗಿದೆ. ಕಾಂಗ್ರೆಸ್- 23, ಬಿಜೆಪಿ- 22, ಜೆಡಿಎಸ್- 13, ಸಿಪಿಐ(ಎಂ)- 1, ಸ್ವತಂತ್ರರು- 20, ಕೆಜೆಪಿ- 4 ಮಂದಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.