ಚುನಾವಣೆ ಕೆಲಸದಲ್ಲಿ ಅಶಕ್ತ ಶಿಕ್ಷಕರಿಗೆ ವಿನಾಯಿತಿ ನೀಡಿ: ರಾಮಕೃಷ್ಣ ಶಿರೂರು
ಮಂಗಳೂರು: ಜಿಲ್ಲೆಯ ಸರ್ಕಾರಿ ಅನುದಾನಿತ ಪ್ರೌಢಶಾಲೆಯ ಅನಾರೋಗ್ಯ ಪೀಡಿತ ಶಿಕ್ಷಕರಿಗೆ ಈ ಬಾರಿಯ ಚುನಾವಣೆಯ ಕರ್ತವ್ಯ ನಿರ್ವಹಣೆಯಲ್ಲಿ ವಿನಾಯಿತಿ ನೀಡಬೇಕು ಎಂದು ರಾಜ್ಯ ಪ್ರೌಢಶಾಲಾ ಸಹಶಿಕ್ಷಕ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ರಾಮಕೃಷ್ಣ ಶಿರೂರು ಹೇಳಿದ್ದಾರೆ. ಅನಾರೋಗ್ಯ, ಗರ್ಭಿಣಿ, 58 ವರ್ಷ ಮೇಲ್ಪಟ್ಟ, ಚಿಕ್ಕ ಮಕ್ಕಳಿರುವ ಶಿಕ್ಷಕರಿಗೆ ಚುನಾವಣೆಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದ್ದು, ವಿನಾಯಿತಿ ನೀಡಬೇಕೆಂದು ಘಟಕ ವಿನಂತಿಸಿಕೊಂಡಿದೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ಸಕಾರಾತ್ಮವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.