ಪುತ್ತೂರು: 34 ನಾಮಪತ್ರ ತಿರಸ್ಕೃತ, 103 ಅಧಿಕೃತ
ಪುತ್ತೂರು: ಪುತ್ತೂರು ಪುರಸಭೆಯ 27 ವಾರ್ಡ್ಗಳಿಗೆ ಸಲ್ಲಿಸಲಾಗಿದ್ದ ಒಟ್ಟು 137 ನಾಮಪತ್ರಗಳ ಪೈಕಿ 34 ನಾಮಪತ್ರಗಳು ವಿವಿಧ ಕಾರಣಗಳಿಗಾಗಿ ತಿರಸ್ಕೃತಗೊಂಡಿದ್ದು, 103 ನಾಮಪತ್ರಗಳು ಅಧಿಕೃತಗೊಂಡಿವೆ.
27 ವಾರ್ಡ್ಗಳಿಗೆ ಒಟ್ಟು 137 ನಾಮಪತ್ರ ಸಲ್ಲಿಕೆಯಾಗಿತ್ತು. ಬಿಜೆಪಿಯಿಂದ 46, ಕಾಂಗ್ರೆಸ್ನಿಂದ 44, ಜೆಡಿಎಸ್ನಿಂದ 21, ಎಸ್ಡಿಪಿಐನಿಂದ 15, ಸ್ವತಂತ್ರರು 9, ಸಿಪಿಐಎಂ ಮತ್ತು ಕೆಜೆಪಿಯಿಂದ ತಲಾ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು.
ಸೋಮವಾರ ನಡೆದ ನಾಮಪತ್ರ ಪರಿಶೀಲನೆ ವೇಳೆ 34 ನಾಮಪತ್ರಗಳು ತಿರಸ್ಕೃತಗೊಂಡಿವೆ. 8 ಮಂದಿ ಅಭ್ಯರ್ಥಿಗಳು ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದ್ದರು.