ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿಜೆಪಿಯಿಂದ ಜನ ಸಾಮಾನ್ಯರ ರಕ್ಷಣೆ: ಡೀವಿ

Lingaraj Badiger
Updated On : 26 Feb 2013, 11:08 am

ಉಪ್ಪಿನಂಗಡಿ: ರಾಜ್ಯ ಬಿಜೆಪಿ ಸರ್ಕಾರದಿಂದಾಗಿ ರಾಜ್ಯದ ಕಟ್ಟ ಕಡೆಯ ಬಡವನ ಆರೋಗ್ಯ ರಕ್ಷಣೆಗೆ ವಿಶೇಷ ಯೋಜನೆಗಳನ್ನು ಅನುಷ್ಠಾನಿಸಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಹೇಳಿದರು.
ಅವರು ಪುತ್ತೂರು ತಾಲೂಕಿನ ಕೈಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ರಾಜ್ಯದ 224 ಕ್ಷೇತ್ರಗಳ ಪೈಕಿ ಸುಳ್ಯ ವಿಧಾನಸಭಾ ಕ್ಷೇತ್ರ ಅತೀ ಹೆಚ್ಚು ಅನುದಾನವನ್ನು ಗಳಿಸಿದೆ. ಇದಕ್ಕೆ ಅಂಗಾರ ಅವರ ಜನಪರ ಕಾಳಜಿಯ ಪ್ರಯತ್ನವೇ ಕಾರಣ. ಅವರ ಸತತ ಪ್ರಯತ್ನದಿಂದಾಗಿಯೇ ಕಡಬ ತಾಲೂಕು ರಚನೆಯಾಗಿದೆ. ಮುಂದಿನ ದಿನಗಳಲ್ಲಿ ನೆಲ್ಯಾಡಿಯನ್ನು ಹೋಬಳಿ ಕೇಂದ್ರವನ್ನಾಗಿಸಲಾಗುವುದು ಎಂದು ತಿಳಿಸಿದರು.
ಶಾಸಕ ಎಸ್. ಅಂಗಾರ, ಆಶಾ ತಿಮ್ಮಪ್ಪ ಗೌಡ ಮಾತನಾಡಿದರು. ಬಾಲಕೃಷ್ಣ ಸುವರ್ಣ ಬಾಣಜಾಲು, ಶಶಿಪ್ರಭಾ, ಆಶೋಕ್ ಹಲ್ಯಾರ, ಡಾ. ಆಶಾ ಅಭಿಕಾರ್, ಓ.ಆರ್. ಶ್ರೀರಂಗಪ್ಪ, ಬಿ.ವಿ. ಶಿವಪ್ಪ, ಶೇಷಶಯನ .ಕೆ, ಡಾ. ಸುಚಿತ್ರಾ ರಾವ್, ಡಾ. ರಜನಿ ಇದ್ದರು.ಬಾಲಕೃಷ್ಣ ಬಿ. ಸ್ವಾಗತಿಸಿದರು. ಜಯರಾಮ ಪುಜಾರಿ ವಂದಿಸಿದರು. ಲಕ್ಷ್ಮಿನಾರಾಯಣ ರಾವ್ ಆತೂರು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement