ವಿವಿಯಲ್ಲಿ ನಾಳೆಯಿಂದ 'ಝೆನಿತ್ ಫೆಸ್ಟ್'
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಫೆ. 27 ಮತ್ತು28 ರಂದು ಮಂಗಳಾ ಸಭಾಂಗಣದಲ್ಲಿ ರಾಜ್ಯಮಟ್ಟದ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಫೆಸ್ಟ್ 'ಝೆನಿತ್-2013' ನಡೆಯಲಿದೆ. ವ್ಯಕ್ತಿತ್ವ ವಿಕಸನದ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ವಿ.ವಿ. ಕುಲಸಚಿವ ಪ್ರೊ.ಪಿ.ಎಸ್. ಯಡಪಡಿತ್ತಾಯ ಉದ್ಘಾಟಿಸುವರು. ಫಾ. ವಲೆರಿಯನ್ ಮೆಂಡೋನ್ಸಾ ಪಾಲ್ಗೊಳ್ಳುವರು ಎಂದು ಪ್ರೊ.ಎ. ರಘುರಾಮ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೆಸಮ್ ಜೊಯ್ ಡಿಸೋಜ, ವಿದ್ಯಾಲತಾ, ಜಿನ್ಸಿ ಇದ್ದರು.