ಹಸಿರು ಬಣ್ಣ ಮೇಲೆ ಕೇಸರಿ ಬಳಿದ ಪೊಲೀಸರು!
ಮಂಗಳೂರು: ಮುಡಿಪು ಬಜರಂಗದಳ ಕಟ್ಟೆಗೆ ದುಷ್ಕರ್ಮಿಗಳು ಹಸಿರು ಬಣ್ಣ ಬಳಿದರೆ, ಪೊಲೀಸರು ರಾತೋರಾತ್ರಿ ಕೇಸರಿ ಬಣ್ಣ ಬಳಿದಿದ್ದಾರೆ!
ಬಣ್ಣ ಬಳಿದ ದುಷ್ಕರ್ಮಿಗಳನ್ನು ಸೋಮವಾರದ ಒಳಗೆ ಬಂಧಿಸಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ಎಚ್ಚರಿಕೆ ನೀಡಿತ್ತು. ಆದರೆ ಆರೋಪಿಗಳು ಸಿಕ್ಕಿರಲಿಲ್ಲ. ಇದಕ್ಕೆ ಉಪಾಯ ಮಾಡಿದ ಪೊಲೀಸರೇ ಕೇಸರಿ ಬಣ್ಣ ಹಿಡಿದುಕೊಂಡು ಬಂದು ಭಾನುವಾರ ರಾತ್ರಿ ಬಳಿದುಬಿಟ್ಟಿದ್ದಾರೆ ಎನ್ನಲಾಗಿದೆ. 'ಗಲಾಟೆ ನಿಲ್ಲಬಹುದು ಎಂಬ ಕಾರಣಕ್ಕೆ ಪೊಲೀಸರೇ ಬಣ್ಣ ಬಳಿದಿದ್ದಾರೆ, ನಮ್ಮ ಬೇಡಿಕೆ ಇದ್ದದ್ದುಆರೋಪಿಗಳ ಬಂಧನ. ಪೊಲೀಸರು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಮಂಗಳವಾರ ಪ್ರತಿಭಟನೆ ನಡೆಸುತ್ತೇವೆ ಎಂದು ಮುಡಿಪು ಬಜರಂಗದಳ ಪ್ರಕಟಣೆಯಲ್ಲಿ ತಿಳಿಸಿದೆ.