ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಸ್ ಚಾಲಕನ ಮೇಲೆ ಹಲ್ಲೆ

Lingaraj Badiger
Updated On : 27 Feb 2013, 11:22 am

ವಿಟ್ಲ: ಬೈಕ್ ಸವಾರನಿಗೆ ಮುಂದೆ ಸಾಗಲು ಅವಕಾಶ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣವೊಡ್ಡಿ ಸಾರಿಗೆ ಸಂಸ್ಥೆ ಬಸ್ಸು ಚಾಲಕರಿಗೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ವಿಟ್ಲದಲ್ಲಿ ಮಂಗಳವಾರ ಸಂಜೆ ನಡೆದಿದೆ.
ವಿಟ್ಲದಿಂದ ಸಂಜೆ ಪಕಳಕುಂಜಕ್ಕೆ ಸಾಗುವ ರಾಜ್ಯ ರಸ್ತೆ ಸಾರಿಗೆ ಬಸ್ಸನ್ನು ಷಣ್ಮುಕಪ್ಪ ಎಂಬವರು ಚಲಾಯಿಸುತ್ತಿದ್ದು ಮುಂದೆ ಸಾಗಲು ಜಾಗ ಬಿಟ್ಟುಕೊಡಲಿಲ್ಲ ಎಂಬ ನೆಪವೊಡ್ಡಿ ಇಬ್ಬರು ಸಹ ಸವಾರರಿದ್ದ ಬೈಕ್‌ನಲ್ಲಿ ಬಂದ ಕೇಪು ಗಣೇಶ ಎಂಬಾತ ಚಾಲಕ ಕುಳಿತಿದ್ದ ಸೀಟಿನಿಂದ ಎಳೆದು ಥಳಿಸಿ ಗಾಯಗೊಳಿಸಿದನೆನ್ನಲಾಗಿದೆ. ಈ ಸಂದರ್ಭ ಸ್ಥಳದಲ್ಲಿ ಮತ್ತಷ್ಟು ಸಾರ್ವಜನಿಕರು ಸೇರಿದರು. ಪರಿಣಾಮ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ಆರೋಪಿ ಗಣೇಶ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಇದೇ ಸಂದರ್ಭ ಅವರ ಚಿನ್ನದ ಸರ ತುಂಡಾಗಿ ಕಳೆದು ಹೋಗಿದೆ ಎಂದು ತಿಳಿದು ಬಂದಿದೆ.  ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement