ಯುವತಿ ನಾಪತ್ತೆ
ಗಂಗೊಳ್ಳಿ: ನಾಡಾ ಗ್ರಾಮದ ಪಡುಕೋಣೆಯಿಂದ ಯುವತಿ ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾಣೆಯಾದವರು ಸರಸ್ವತಿ (20), ಈಕೆ ಫೆ. 22ರಂದು ಬೆಳಗ್ಗೆ 10.45ಕ್ಕೆ ತಾಯಿಯ ಬಳಿ ಗುಡ್ಡೆಯಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮರಳಿಲ್ಲ ಎಂದು ಆಕೆಯ ತಂದೆ ಮಂಗಳವಾರ ಗಂಗೊಳ್ಳಿ ಠಾಣೆಗೆ ದೂರುನೀಡಿದ್ದಾರೆ. ಅದೇ ದಿನ ಸಂಜೆ ನಾಗರಾಜ ಎಂಬವನು ಫೋನ್ ಮಾಡಿ 'ನಾನು ಸರಸ್ವತಿ ಮದುವೆಯಾಗಿದ್ದೇವೆ' ಎಂದು ತಿಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ನಾಪತ್ತೆ
ಮಣಿಪಾಲ: ಪೆರಂಪಳ್ಳಿಯ ಆಚಾರಿಬೆಟ್ಟು ಎಂಬಲ್ಲಿನ ಮಹಿಳೆ ಕಾಣೆಯಾಗಿರುವ ಘಟನೆ ಸೋಮವಾರ ನಡೆದಿದೆ. ಕಾಣೆಯಾದ ಫ್ಲೋರಾ ಮಸ್ಕರೆನಸ್ (41) ಇಲ್ಲಿನ ನಿವಾಸಿ ರೈಮಂಡ್ ಮಸ್ಕರೇನಸ್ ಎಂಬವರ ಪತ್ನಿ. ಪ್ಲೋರಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ತಿಳಿಸಲಾಗಿದೆ.