ರೇಲ್ವೆ ಬಜೆಟ್ 2013: ಜನ ಏನಂತಾರೆ?
ಮಂಗಳೂರಿಗೆ ಪ್ರತ್ಯೇಕ ವಿಭಾಗ ನಿರ್ಮಿಸಲು ಪೂರಕ ಅಂಶಗಳಿವೆ. ಮಂಗಳೂರು-ಬೆಂಗಳೂರು ಹೊಸ ರೈಲು, ಇಂಟರ್‌ಸಿಟಿ, ತೋಕೂರು- ಭಟ್ಕಳ ಡೆಮೊ ರೈಲು ನೀಡಿದ್ದಾರೆ. ಇದು ಭವಿಷ್ಯದ ಸಾಧ್ಯತೆಗಳಿಗೆ ಭದ್ರ ಬುನಾದಿ.
-ಪಿ.ವಿ. ಮೋಹನ್, ಎಐಸಿಸಿ ಸದಸ್ಯ
ಬೆಂಗಳೂರು-ಮಂಗಳೂರು ರೈಲು ನೀಡಿದ್ದಾರೆ. ಆದರೆ ಇದು ಪ್ರತಿದಿನ ಹೋಗಬೇಕು. ರೈಲು ಪ್ರತ್ಯೇಕ ವಿಭಾಗ ಮಾಡಬೇಕು, ಇದಕ್ಕೆ ನಾವು ಹೋರಾಟ ನಡೆಸುತ್ತೇವೆ.
- ಡೆನಿಸ್ ಡಿಸಿಲ್ವ, ಪಾಲ್ಘಾಟ್ ರೇಲ್ವೆ ವಲಯ ಸಲಹೆ ಸಮಿತಿ ಸದಸ್ಯ
ವಿಭಾಗ ರಚನೆಗೆ ಸಂಸದೀಯ ಸಲಹೆ ಮಂಡಳಿ ಮಂಗಳೂರಿಗೆ ಭೇಟಿ ನೀಡಿ ಸಲಹೆ ನೀಡಬೇಕಿತ್ತು. ಅವರು ಬಂದಿಲ್ಲ, ಘೋಷಣೆಯೂ ಆಗಿಲ್ಲ. ಪ್ರತಿದಿನ ಹಗಲು ರೈಲು ಆಗಿಲ್ಲ.
- ಸುದರ್ಶನ್ ಪುತ್ತೂರು, ಮೈಸೂರು ವಿಭಾಗೀಯ ರೇಲ್ವೆ ಸಲಹಾ ಸಮಿತಿ ಸದಸ್ಯ
ರೈಲಿನಲ್ಲಿ 2 ತಿಂಗಳ ಮೊದಲೇ ಟೆಕೆಟ್ ಬುಕ್ ಆಗಿರುತ್ತದೆ. ತತ್ಕಾಲದಲ್ಲಿಯೂ ಸಿಗುವುದು ಬಹಳ ಕಷ್ಟ. ಹಗಲು ರೈಲು ನಿತ್ಯ ಸಂಚರಿಸಬೇಕು, ರಾತ್ರಿ ರೈಲು ಇನ್ನೊಂದು ಸಿಕ್ಕಿದರೆ ಮಾತ್ರ ನಮ್ಮಂತವರು ಬೆಂಗಳೂರಿಗೆ ರೈಲಲ್ಲಿ ಹೋಗಬಹುದು.
- ಮಧುರಾ ಗುರುಪ್ರಸಾದ್, ಸಂತೆಕಟ್ಟೆ
ಈ ಬಾರಿಯ ರೈಲ್ವೇ ಬಜೆಟ್‌ನಲ್ಲಿ ರೈಲ್ವೇ ಪ್ರಯಾಣಿಕರ ಹಿತದೃಷ್ಟಿಯನ್ನು ಇರಿಸಿಕೊಂಡಿರುವುದು ಖುಷಿಯ ವಿಚಾರ. ಬಜೆಟ್‌ನಲ್ಲಿ ಕರಾವಳಿಗೆ ವಿಶೇಷ ಪ್ರಾಧಾನ್ಯತೆ ನೀಡಬೇಕಾಗಿತ್ತು.
- ಬಾಲಕೃಷ್ಣ ಪಿ. ಸಿವಿಲ್ ಎಂಜಿನಿಯರ್, ಮಾಣಿ
ಮಂಗಳೂರು- ಧರ್ಮಸ್ಥಳ- ಸಕಲೇಶಪುರ ರೈಲು ಸೇವೆ ಮತ್ತು ಮಂಗಳೂರು- ಉಜಿರೆ- ಮೂಡಿಗೆರೆ- ಕಡೂರು ಈ ಮಾರ್ಗಗಳು ಆರಂಭವಾಗಬೇಕು. ಇದರ ಪ್ರಸ್ತಾಪವೇ ಇಲ್ಲವಾಗಿದೆ.
-ಚಂದು ಎಲ್, ದಸಂಸ ಜಿಲ್ಲಾ ಸಂಚಾಲಕ
ದೇಶದ, ರಾಜ್ಯದ ಹಾಗೂ ಮಂಗಳೂರು ವಿಭಾಗದ ದೃಷ್ಟಿಯಿಂದ ಹೆಚ್ಚಿನ ಕೊಡುಗೆಗಳಿಲ್ಲದ, ದೂರದೃಷ್ಟಿ ಕೊರತೆಯ, ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಕಾಣದ ರೈಲ್ವೆ ಮುಂಗಡ ಪತ್ರವಾಗಿದೆ.
- ಕೃಷ್ಣ ಭಟ್, ಉದ್ಯಮಿ, ವೇಣೂರು
ಕರಾವಳಿ ಜನರಿಗೆ ಅನುಕೂಲಕರವಾದ ಬಜೆಟ್. ಮಂಗಳೂರು- ಮಡಗಾಂವ್ ಇಂಟರ್ ಸಿಟಿ ರೈಲು, ಮಂಗಳೂರು- ಬೆಂಗಳೂರು ವಾರದ ರೈಲು, ಭಟ್ಕಳ- ತೋಕೂರು ಲೋಕಲ್ ರೈಲು ಸ್ವಾಗತಾರ್ಹ. ಪ್ರಯಾಣ ದರ ಏರಿಕೆ ಆಗದಿರುವುದು ಸಂತಸದ ವಿಷಯ.
- ಕೆಂಚನೂರು ಸೋಮಶೇಖರ್ ಶೆಟ್ಟಿ, (ಕುಂದಾಪುರ ರೇಲ್ವೇ ಹಿತರಕ್ಷಣಾ ವೇದಿಕೆ ಅಧ್ಯಕ್ಷ)