ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಷ ಸೇವಿಸಿ ವೃದ್ಧ ಆತ್ಮಹತ್ಯೆ

Lingaraj Badiger
Updated On : 27 Feb 2013, 11:18 am

ಕೋಟ: ಮೊಳಹಳ್ಳಿ ಗ್ರಾಮದ ಗೇರುಹಾಡಿಯಲ್ಲಿ ವ್ಯಕ್ತಿವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಪದ್ದ ಪೂಜಾರಿ (70) ಮೃತರು. ಇವರು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಸೌಡ ನಿವಾಸಿ  ಭಾಸ್ಕರ ಪೂಜಾರಿ ಎಂಬವರ ತಂದೆ. ವಿಪರೀತ ಮದ್ಯಪಾನ ಮಾಡುತಿದ್ದು, ತಿಂಗಳಿನಿಂದ ಮನೆಗೆ ಬಾರದೇ ಎಲ್ಲೆಲ್ಲೋ ಅಲೆದುಕೊಂಡಿರುತ್ತಿದ್ದರು. ಇದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾಸ್ಕರ ಪೂಜಾರಿ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಸಾವು
ಕೊಲ್ಲೂರು: ಚಿತ್ತೂರು ಗ್ರಾಮ ಮಾರಣಕಟಯಲ್ಲಿ ಯುವಕ ವಿಷ ಸೇವಿಸಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮಾಲಿಂಗ ಪೂಜಾರಿ (40) ಮೃತರು. ಕೆಲ ಸಮಯದಿಂದ ಮಾನಸಿಕ ಹಾಗೂ ಬಿ.ಪಿ. ಸಮಸ್ಯೆಯಿಂದ ನರಳುತ್ತಿದ್ದು ಫೆ. 4ರಂದು ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ನರಳುತ್ತಿದ್ದವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಈ ಬೆಳಿಯ ಪೂಜಾರಿ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಸಾಂಬಾರ' ಭ್ರಮೆ; ವಿಷ ಸೇವಿಸಿ ಸಾವು
ಮಣಿಪಾಲ: ಇಲ್ಲಿನ ಪರ್ಕಳದಲ್ಲಿ ವಾಸಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಗ್ರಾಮದ ನಿಬಿನಕೆರೆ ಎಂಬಲ್ಲಿ ಬಾಲಕ ವಿಷ ಸೇವಿಸಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಶಿವಮೊಗ್ಗದ ಎಚ್.ಕೆ.ಅನಂತ ಶೆಟ್ಟಿ ಎಂಬವರ ಮಗ ಪ್ರಜ್ಞೇಶ್ ಶೆಟ್ಟಿ (13) ಮೃತರು. ಈತ ಫೆ. 21ರಂದು ಮನೆಯಲ್ಲಿ ಆಮ್ಲೆಟ್ ಮಾಡಿ ಅದಕ್ಕೆ ಕಾಳು ಮೆಣಸಿನ ಪುಡಿ ಎಂದು ಆಕಸ್ಮಾತ್ತಾಗಿ ಇಲಿ ಪಾಷಾಣ ಹಾಕಿ ತಿಂದಿದ್ದು, ನಂತರ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಸಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾನೆ, ಈ ಬಗ್ಗೆ ಅನಂತ ಶೆಟ್ಟಿ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಾಡ್‌ಬ್ಯಾಂಡ್ ದರ ಪರಿಷ್ಕರಣೆ
ಮಂಗಳೂರು: ಬಿಎಸ್‌ಎನ್‌ಎಲ್ ಅನಿಯಮಿತ ಎಡಿಎಸ್‌ಎಲ್ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ದರ ಪರಿಷ್ಕರಿಸಿದೆ. ವಿವಿಧ ಮುಂಗಡ ಪಾವತಿ ಪ್ಲಾನ್(ವಾರ್ಷಿಕ/ಎರಡು/ಮೂರು)ದರವನ್ನು ಚಾಲ್ತಿಯಲ್ಲಿರುವ, ಹೊಸ ಬ್ರಾಡ್‌ಬ್ಯಾಂಡ್ ಸಂಪರ್ಕಗಳಿಗೆ ಅನ್ವಯವಾಗುವಂತೆ ಪರಿಷ್ಕರಿಸಿದೆ. ಹೊಸ ದರ ಮಾ.1ರಿಂದ ಜಾರಿಗೆ. ವಿವರಕ್ಕೆ ಢಿಢಿಢಿ.್ಞಛ್ಠಟಿಛಡಿಛ್ಞಛ.ಛಿಡಟಿಟ.್ಛ್ಟ.್ಝಟಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement