ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವೃದ್ಧೆಯ ಪುಸಲಾಯಿಸಿ ಸರ ದೋಚಿದ

Lingaraj Badiger
Updated On : 27 Feb 2013, 11:22 am

ಬಂಟ್ವಾಳ: ಪರಿಚಿತನಂತೆ ನಟಿಸಿದ ಅಪರಿಚಿತ ವೃದ್ಧೆಯ ಚಿನ್ನದ ಸರ ಎಗರಿಸಿದ ಘಟನೆ ಮಂಗಳವಾರ ಸಂಜೆ ಬಿ.ಸಿ.ರೋಡ್‌ನಲ್ಲಿ ನಡೆದಿದೆ.
ಬಿ.ಮೂಡ ಗ್ರಾಮ ಮಠ ಮಿತ್ತಲಚ್ಚಿಲ್ ನಿವಾಸಿ ಸೀತಾ (63) ಸರ ಕಳೆದುಕೊಂಡವರು.
ಬಸ್ ನಿಲ್ದಾಣದಲ್ಲಿ ನಿಂತಿದ್ದ ಸೀತಾ ಬಳಿ ಬಂದ ವ್ಯಕ್ತಿ ಪರಿಚಯಸ್ಥನಂತೆ ನಟಿಸಿ ಹೊಟೇಲೊಂದರಲ್ಲಿ ಚಾ ಕುಡಿಸಿ ಬಳಿಕ ಅವರನ್ನು ಪುಸಲಾಯಿಸಿ ಪಕ್ಕದ ಜ್ಯುವೆಲ್ಲರಿ ಮಳಿಗೆ ಬಳಿಗೆ ಕರೆದೊಯ್ದ. ಅವರ ಕತ್ತಿನಲ್ಲಿದ್ದ ರೋಪ್ ಮಾದರಿಯ ಸರದಂತೆ ತನ್ನ ತಾಯಿಗೂ ಮಾಡಿಸಲಿದ್ದು, ಕತ್ತಿನಲ್ಲಿರುವ ಸರ ನೀಡುವಂತೆ ಒತ್ತಾಯಿಸಿದ ಪರಿಣಾಮ ಸೀತಾ ತನ್ನ ಕತ್ತಿನಲ್ಲಿದ್ದ ಸರವನ್ನು ವ್ಯಕ್ತಿಯ ಕೈಗೆ ನೀಡಿದ್ದರು. ಅದನ್ನು ಪಡಕೊಂಡ ಆತ ನಕಲಿ ಸರ ಹಾಗೂ ಮೊಬೈಲ್ ದೂರವಾಣಿ ಸಂಖ್ಯೆ ನೀಡಿ ಹೋದಾತ ಬಳಿಕ ನಾಪತ್ತೆಯಾಗಿದ್ದ. ಕಾದು ಸುಸ್ತಾದ ಸೀತಾಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂತು. ಬಳಿಕ ಸಾರ್ವಜನಿಕರ ಗಮನಕ್ಕೆ ತಂದು ಬಂಟ್ವಾಳ ನಗರ ಪೊಲೀಸರಿಗೆ ತಿಳಿಸಲಾಯಿತು. ಸುಮಾರು ರು. 27 ಸಾವಿರ ಮೌಲ್ಯದ ಸರ ಕಳೆದುಕೊಂಡಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement