ಅಡಕೆ ಅಕ್ರಮ ಸಾಗಾಟ: ಮೂವರ ಬಂಧನ
ಬೆಳ್ತಂಗಡಿ: ಅಡಕೆಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಬೆಳ್ತಂಗಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅರ್ಕುಳ ಗ್ರಾಮದ ಅಬ್ದುಲ್ ಹಕೀಂ (31), ಇಬ್ರಾಹಿಂ (34) ಮತ್ತು ಪಡಂಗಡಿ ಗ್ರಾಮದ ಮೊಹಮ್ಮದ್ ರಫೀಕ್ (32) ಬಂಧಿತರು. ಲಾಯಿಲ ಗಾಂಧಿ ನಗರದ ಕುತ್ರೊಟ್ಟು ಎಂಬಲ್ಲಿ ಸಂಶಯಾತ್ಮಕವಾಗಿ ಹೋಗುತ್ತಿದ್ದ ಪಿಕಪ್ ವಾಹನವನ್ನು ಬೆಳ್ತಂಗಡಿ ಪೊಲೀಸರು ತಡೆದು ನಿಲ್ಲಿಸಿದಾಗ ಅದರಲ್ಲಿ ಯಾವುದೇ ಪರವಾನಗಿ ಇಲ್ಲದೆ 37 ಅಡಕೆ ತುಂಬಿದ ಮೂಟೆಗಳು ಕಂಡುಬಂದಿದೆ. ಈ ಸಂಬಂಧ ಮೂವರನ್ನು ಬಂಧಿಸಿ ಸುಮಾರು 3,15,000 ಮೌಲ್ಯದ ಅಡಕೆ, ಪಿಕಪ್ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.