ಅನಿಲ್ ಎಚ್.ಟಿ.ಗೆ ಪ್ರಶಸ್ತಿ
ಮಡಿಕೇರಿ: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ 2012ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, 'ಕನ್ನಡಪ್ರಭ'ದಲ್ಲಿ ಪ್ರಕಟಿತ ವರದಿಗಳಿಗಾಗಿ ಜಿಲ್ಲಾ ವರದಿಗಾರ ಅನಿಲ್ ಎಚ್.ಟಿ. ಅವರಿಗೆ ಮೂರು ಪ್ರಶಸ್ತಿಗಳು ಲಭಿಸಿವೆ. ಅನಿಲ್ ಎಚ್.ಟಿ. ಬರೆದಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ 'ಕಲಿಗಳ ನಾಡಲ್ಲಿ ಕಟುಮಸ್ತಿನ ದೇಹ ಪ್ರದರ್ಶನ', ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಗೆ ಜಗತ್ತಿಗೇ ಮಾದರಿ ಈ ಕರಿಮೆಣಸಿನ ಕಾಶಿ', ಅತ್ಯುತ್ತಮ ರಾಜಕೀಯ ವರದಿ ಪ್ರಶಸ್ತಿಗೆ 'ಸಾಹಿತ್ಯ ಪರಿಷತ್ ಚುನಾವಣೆ- ರಾಜಕೀಯ ರಂಗು' ವರದಿ ಆಯ್ಕೆಯಾಗಿದೆ. ಮಾರ್ಚ್ ಅಂತ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.