ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಡಾ. ವೀರೇಂದ್ರ ಹೆಗ್ಗಡೆಗೆ ಅಹಲ್ಯಾಬಾಯಿ ಪುರಸ್ಕಾರ

Parashurama
Updated On : 27 Feb 2013, 9:24 am

ಬೆಳ್ತಂಗಡಿ: ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ಅಹಲ್ಯೋತ್ಸವ ಸಮಿತಿ ವತಿಯಿಂದ 16ನೇ ರಾಷ್ಟ್ರೀಯ ಪುರಸ್ಕಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಧರ್ಮ, ಸಂಸ್ಕೃತಿ, ಶಿಕ್ಷಣ, ಸಮಾಜಸೇವೆ, ಗ್ರಾಮೋದ್ಧಾರ, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿನ ಸೇವೆಗಳನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
18ನೇ ಶತಮಾನದಲ್ಲಿ ಹೋಳ್ಕರ್ ವಂಶದ ರಾಣಿಯಾಗಿದ್ದ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರು ಆಡಳಿತ ದಕ್ಷತೆ, ಜನಕಲ್ಯಾಣ, ಸಾಮಾಜಿಕ, ಧಾರ್ಮಿಕ ಕಾರ್ಯಗಳಿಂದಾಗಿ 'ನಾರಿ ರತ್ನ' ಎಂದೇ ಮನ್ನಣೆ ಪಡೆದಿದ್ದರು. ಎರಡು ಶತಮಾನಗಳ ಬಳಿಕವೂ ಅವರ ಸ್ಮರಣೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಉತ್ಸವ ಮತ್ತು ಪುರಸ್ಕಾರ ಸಮಾರಂಭ ನಡೆಯುತ್ತಿವೆ. ಈವರೆಗೆ ನಾನಾಜಿ ದೇಶಮುಖ್, ಡಾ.ಬಿ.ಆರ್. ಚಿದಂಬರಂ, ವಿಜಯರಾಜೇ ಸಿಂಧ್ಯಾ, ಸುಧಾ ಮೂರ್ತಿ ಸೇರಿದಂತೆ 15 ಗಣ್ಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1 ಲಕ್ಷ ನಗದು ಮೊತ್ತ ಹೊಂದಿರುವ ಈ ಪುರಸ್ಕಾರವನ್ನು ಮಾ.2ರಂದು ಇಂದೋರ್ ನಗರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಉತ್ಸವ ಸಮಿತಿ ಅಧ್ಯಕ್ಷ, ಲೋಕಸಭಾ ಸದಸ್ಯೆ ಸುಮಿತ್ರಾ ಮಹಾಜನ್ ಮತ್ತು ಕಾರ್ಯಾಧ್ಯಕ್ಷ- ಉದ್ಯಮಿ ಅಶೋಕ್ ಡಾಗಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement