ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೂಜಾರಿ ಭೇಟಿ: ರು. 1.10 ಲಕ್ಷ ಸಹಾಯಧನ ವಿತರಣೆ

Rashmi Kasaragodu
Updated On : 28 Feb 2013, 12:23 pm

ಬಂಟ್ವಾಳ: ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ಎಂಬಲ್ಲಿ ವಿಕೃತ ಕಾಮುಕನಿಂದ ಕೊಲೆಗೈಯ್ಯಲ್ಪಟ್ಟ ಸೌಮ್ಯಾಳ ಮನೆಗೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಬುಧವಾರ ಬೆಳಗ್ಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು.
ತನ್ನ ವತಿಯಿಂದ ರು. 10 ಸಾವಿರ ನಗದು ಸೇರಿದಂತೆ ಮಂಗಳವಾರ ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರಿಂದ ಸಂಗ್ರಹಿಸಲಾದ ಒಟ್ಟು ರು. 1.10 ಲಕ್ಷ ಮೊತ್ತವನ್ನು ಮೃತ ಸೌಮ್ಯಳ ತಂದೆ ಸೀತಾರಾಮ ಸೇರಿಗಾರ ಅವರಿಗೆ ಪೂಜಾರಿ ಹಸ್ತಾಂತರಿಸಿದರು.
ಬಳಿಕ ಪ್ರಕರಣವನ್ನು ಖಂಡಿಸಿ ಮಾತನಾಡಿದ ಜನಾರ್ದನ ಪೂಜಾರಿ, ಇದೊಂದು ಜಿಲ್ಲೆಗೆ ಅಂಟಿದ ಕಳಂಕ ಎಂದು ವ್ಯಾಖ್ಯಾನಿಸಿದರು. ಘಟನೆಗೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿರುವುದಾಗಿ ತಿಳಿಸಿದ ಅವರು, ಅತ್ಯಾಚಾರ ಮಾಡಿ ಕೊಲೆಗೈಯ್ಯುವಂತಹ ಹೀನ ಕೃತ್ಯ ದೇಶಾದ್ಯಂತ ವ್ಯಾಪಿಸಿದ್ದು, ಇಂತಹ ಘಟನೆ ಮುಂದೆ ನಡೆಯದಂತೆ ಎಚ್ಚರ ವಹಿಸಿಕೊಳ್ಳಬೇಕು. ಯುವ ಸಮುದಾಯದಲ್ಲಿ ಇಂತಹ ರಾಕ್ಷಸಿ ಮನೋಭಾವನೆ ತಡೆಗಟ್ಟಲು ಮಠಾಧೀಶರು, ಚರ್ಚ್ ಧರ್ಮಗುರುಗಳು, ಮಸೀದಿಯ ಗುರುಗಳು ಪ್ರಯತ್ನಿಸಬೇಕು ಎಂದರು. ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ, ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ್, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್ ಪಾಣೆಮಂಗಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಪಿ.ಎಸ್. ಮೋಹನ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement