ಇಂದು ರಾಷ್ಟ್ರೀಯ ತಾಂತ್ರಿಕ ಸ್ಪರ್ಧೆ
ಮಂಗಳೂರು: ವಳಚ್ಚಿಲ್ನ ಶ್ರೀನಿವಾಸ ತಾಂತ್ರಿಕ ವಿದ್ಯಾಲಯದಲ್ಲಿ ರಾಷ್ಟ್ರೀಯ ತಾಂತ್ರಿಕ ಸ್ಪರ್ಧೆ 'ಎನ್ವಿಷನ್-2013' ಮಾ.1ರಂದು ಏರ್ಪಡಲಿದೆ. ಬೆಳಗ್ಗೆ 9ಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ
ರಿಜಿಸ್ಟ್ರಾರ್ ಡಾ.ಕೆ.ಇ.ಪ್ರಕಾಶ್ ಉದ್ಘಾಟಿಸಲಿದ್ದು, ಎ.ಶಾಮರಾವ್ ಶಿಕ್ಷಣ ಫೌಂಡೇಶನ್ ಅಧ್ಯಕ್ಷ ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸುವರು. ಈ ಸ್ಪರ್ಧೆಯಲ್ಲಿ ದೇಶದ 50ಕ್ಕೂ ಹೆಚ್ಚು ತಾಂತ್ರಿಕ ಮಹಾವಿದ್ಯಾಲಯದ 350ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸುವರು.
ಇದರಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ವಿವರಕ್ಕೆ 9449639120ನ್ನು ಸಂಪರ್ಕಿಸಬಹುದು ಎಂದು ವಿದ್ಯಾಲಯ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.